` ರವಿ ಸರ್ ಮಕ್ಕಳಿಗಿಂತ ನಾನೇ ಅದೃಷ್ಟವಂತ - ಲಾಯರ್ ಕಿಚ್ಚನ ಮನದಾಳ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep feels lucky to work with ravichandran
Ravichandran, Sudeep

ರವಿ ಸರ್ ಅವರಿಗೆ ನಾನು ನಿರ್ದೇಶನ ಮಾಡಿದ್ದೆ. ಈಗ ಅವರು ನನಗೆ ನಿರ್ದೇಶನ ಮಾಡುತ್ತಿದ್ದಾರೆ. ಸಣ್ಣ ಸಣ್ಣ ದೃಶ್ಯಗಳನ್ನೂ ಎಷ್ಟು ಪರಿಣಾಮಕಾರಿಯಾಗಿ ಚಿತ್ರೀಕರಿಸಬೇಕು ಎನ್ನುವುದನ್ನು ಅವರನ್ನು ನೋಡಿ ಕಲಿಯಬೇಕು. ಇದು ರವಿಚಂದ್ರನ್ ಡೈರೆಕ್ಷನ್ ಬಗ್ಗೆ ಸುದೀಪ್ ಹೇಳುವ ಮಾತು.

ಚಿಕ್ಕ ಪಾತ್ರವನ್ನು ಒಪ್ಪಿಕೊಂಡಿದ್ದಕ್ಕೆ ಕಾರಣ ಹೇಳಿದ ಸುದೀಪ್ `ಅವರು ಇಷ್ಟು ವರ್ಷ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಕರೆಯೋದೇ ನಮ್ಮ ಅದೃಷ್ಟ. ಅವರು ಕರೆದಾಗ ತಲೆಬಾಗಿ ನಾವೆಲ್ಲ ಹೋಗಬೇಕು ಎಂದಿದ್ದಾರೆ ಸುದೀಪ್.

ಅವರ ನಿರ್ದೇಶನದಲ್ಲಿ ಅಭಿನಯಿಸುವ ಸೌಭಾಗ್ಯ ಅವರ ಮಕ್ಕಳಿಗೇ ಇನ್ನೂ ಸಿಕ್ಕಿಲ್ಲ. ಅವರಿಗೆ ಹೋಲಿಸಿದರೆ ನಾನೇ ಅದೃಷ್ಟವಂತ ಎಂದಿದ್ದಾರೆ ಕಿಚ್ಚ.

ರವೊ ಬೋಪಣ್ಣ ಚಿತ್ರದಲ್ಲಿ ಸುದೀಪ್ ಅವರದ್ದು ಲಾಯರ್ ಪಾತ್ರ. ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಕ್ಯಾಂಪಸ್‍ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಸುದೀಪ್ ಲಾಯರ್ ಆದ್ರೆ, ಭಾರತಿ ವಿಷ್ಣುವರ್ಧನ್ ಜಡ್ಜ್. 

ಸುದೀಪ್‍ಗೆ ನಿರ್ದೇಶನ ಮಾಡುವುದು ಹೇಗೆ ಅನ್ನೋದನ್ನ ರವಿಚಂದ್ರನ್ ಹೇಳ್ತಾರೆ `ಒಬ್ಬ ನಿರ್ದೇಶಕನಿಗೆ ಸುದೀಪ್ ಅವರಂತ ನಟನನ್ನು ನಿರ್ದೇಶನ ಮಾಡುವಷ್ಟು ಖುಷಿ ಮತ್ತೊಂದು ಇರುವುದಿಲ್ಲ. ಅವರೊಳಗೊಬ್ಬ ನಿರ್ದೇಶಕನಿದ್ದಾನೆ. ಹೀಗಾಗಿ ವನ್ ಮೋರ್ ಎನ್ನುವ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಸುದೀಪ್ ಇದ್ದರೆ ಇಡೀ ಸಿನಿಮಾ ಟೀಂನಲ್ಲೊಂದು ಪಾಸಿಟಿವ್ ಎನರ್ಜಿ ಇರುತ್ತೆ' ಎಂದಿದ್ದಾರೆ ಕ್ರೇಜಿಸ್ಟಾರ್.

Shivarjun Movie Gallery

Popcorn Monkey Tiger Movie Gallery