` ವಸಿಷ್ಠ ಸಿಂಹ ಹೆಸರಲ್ಲಿ ಹುಡುಗಿಯರಿಗೆ ದೋಖಾ - ಅರೆಸ್ಟ್ ಆದವನ್ಯಾರು ಗೊತ್ತಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
fraud arrested for scamming under vashistha simha's  name
Vasistha Simha Image

ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ, ವಿಶಿಷ್ಟ ಧ್ವನಿ, ಚುರುಕು ಅಭಿನಯದ ಮೂಲಕ ಗಟ್ಟಿ ಹೆಜ್ಜೆ ಊರುತ್ತಿರುವ ನಟ ವಸಿಷ್ಠ ಸಿಂಹ. ಈಗ ಅವರ ಹೆಸರಲ್ಲಿ ಹುಡುಗಿಯರಿಗೆ ವಂಚಿಸುತ್ತಿದ್ದವನೊಬ್ಬ ಅರೆಸ್ಟ್ ಆಗಿದ್ದಾನೆ.

ಬೆಂಗಳೂರಿನ ಸುಂಕದಕಟ್ಟೆ ಸಮೀಪದ ಹೊಯ್ಸಳ ನಗರದಲ್ಲಿ ವೆಂಕಟೇಶ್ ಎಂಬ ಹೆಸರಿನ ಮೇಕಪ್ ಮ್ಯಾನ್, ವಸಿಷ್ಠ ಸಿಂಹ ಹೆಸರಲ್ಲಿ ಹುಡುಗಿಯರನ್ನು ವಂಚಿಸುತ್ತಿದ್ದ. ಸೋಷಿಯಲ್ ಮೀಡಿಯಾದಲ್ಲಿ ವಸಿಷ್ಠ ಹೆಸರಿನ ಖಾತೆ ತೆರೆದಿದ್ದ. ತನ್ನ ನಂಬರ್‍ನ್ನು ಟ್ರೂ ಕಾಲರ್‍ನಲ್ಲಿ ವಸಿಷ್ಠ ಸಿಂಹ ಎಂದು ಬದಲಿಸಿದ್ದ. ಹೀಗಾಗಿ ಆತನನ್ನು ನಂಬಿ ಹಲವು ಹೆಣ್ಣು ಮಕ್ಕಳು ಮೋಸ ಹೋಗಿದ್ದಾರೆ.

ಫೋನ್ ಮಾಡಿದವರಿಗೆ ಬುದ್ದಿವಂತಿಕೆಯಿಂದ `ನಾನು  ವಸಿಷ್ಠ ಸಿಂಹ ಅವರ ಅಸಿಸ್ಟೆಂಟ್. ಅವರ ನಂಬರ್ ಕೊಡುತ್ತೇನೆ, ತೆಗೆದುಕೊಳ್ಳಿ' ಎನ್ನುತ್ತಿದ್ದ ವಸಿಷ್ಠ ಸಿಂಹ ತನ್ನದೇ ಇನ್ನೊಂದು ನಂಬರ್ ಕೊಡುತ್ತಿದ್ದ. ಕೆಲವರಿಂದ ಸಿನಿಮಾ, ಸೀರಿಯಲ್‍ಗಳಲ್ಲಿ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಸಾವಿರಾರು ರೂಪಾಯಿ ದುಡ್ಡು ಪಡೆದು ಯಾಮಾರಿಸಿದ್ದ. ಸೈಬರ್ ಕ್ರೈಂ ಪೊಲೀಸರು ಆರೋಪಿ ವೆಂಕಟೇಶ್‍ನನ್ನು ಬಂಧಿಸಿದ್ದಾರೆ.

Shivarjun Movie Gallery

Popcorn Monkey Tiger Movie Gallery