ಜೋಗಿ, ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್ ಸಿನಿಮಾ. ನಿರ್ದೇಶಕ ಪ್ರೇಮ್‍ರನ್ನು ಅಭಿಮಾನಿಗಳು ಇಂದಿಗೂ ಗುರುತಿಸೋದು ಜೋಗಿ ಪ್ರೇಮ್ ಅಂತಾನೆ. ಶಿವಣ್ಣ ವೃತ್ತಿ ಜೀವನದ ಅತಿ ದೊಡ್ಡ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಇದೂ ಒಂದು. ಡಾ.ರಾಜ್‍ಕುಮಾರ್, ಶಿವಣ್ಣನ ಜೋಳಿಗೆಗೆ ನೀಡಿದ್ದ ಕಾಣಿಕೆಯನ್ನು ಕನ್ನಡಿಗ ಮೆಚ್ಚಿದ್ದ. ಈ ಸಿನಿಮಾ ನೋಡಲೆಂದೇ ಸೂಪರ್ ಸ್ಟಾರ್ ರಜನಿಕಾಂತ್ ಬೆಂಗಳೂರಿಗೆ ಬಂದಿದ್ದರು. ತಮ್ಮದೇ ಚಿತ್ರವನ್ನು ನೋಡಿ, ಶಿವಣ್ಣ ಕಣ್ಣೀರು ಹಾಕಿದ್ದರು.
ಶಿವರಾಜ್‍ಕುಮಾರ್, ಅರುಂಧತಿ ನಾಗ್‍ರ ಅಭಿನಯ, ಬೇಡುವನು ವರವನ್ನು ಕೊಡು ತಾಯಿ ಜನ್ಮವನು.. ಹಾಡು ಇಂದಿಗೂ ಜೀವಂತವಾಗಿವೆ. ಅಷ್ಟರಮಟ್ಟಿಗೆ ಹಿಟ್ ಎನಿಸಿದ್ದ ಚಿತ್ರಕ್ಕೆ 14 ವರ್ಷ ತುಂಬಿದ್ದನ್ನು ಜೋಗಿ ಪ್ರೇಮ್ ಅಭಿಮಾನದಿಂದ ಸ್ಮರಿಸಿದ್ದಾರೆ.
ಚಿತ್ರವನ್ನು ನಿರ್ಮಿಸಿದ್ದ ಅಶ್ವಿನಿ ಕಂಪೆನಿ, ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಇಡೀ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.