2018ರಲ್ಲಿ ಬಾಕ್ಸಾಫೀಸ್‍ನಲ್ಲಿ ಧೂಳೆಬ್ಬಿಸಿದ್ದ ಕೆಜಿಎಫ್ ಚಿತ್ರದ ಚಾಪ್ಟರ್ 2 ಚಿತ್ರೀಕರಣ ಹಂತದಲ್ಲಿದೆ. ಯಶ್ ಜೊತೆಗೀಗ ಸಂಜಯ್ ದತ್ ಜೊತೆಗೂಡಿದ್ದಾರೆ. ಈಗ ಶುರುವಾಗಿರೋದು ಚಿತ್ರದ ರಿಲೀಸ್ ಡೇಟ್ ಕುರಿತ ಸುದ್ದಿ. 2020ರ ಏಪ್ರಿಲ್‍ನಲ್ಲಿ ಕೆಜಿಎಫ್-2 ರಿಲೀಸ್ ಆಗಲಿದೆಯಂತೆ.
ಮೊದಲಿನ ಪ್ಲಾನ್ ಪ್ರಕಾರ 2020ರ ಡಿಸೆಂಬರ್‍ನಲ್ಲಿ ಸಿನಿಮಾ ರಿಲೀಸ್ ಎನ್ನಲಾಗಿತ್ತು. ಆದರೆ, ಈಗ ಏಪ್ರಿಲ್‍ಗೆ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಕೆಜಿಎಫ್ ಮೊದಲ ಭಾಗವನ್ನು ಮುಗಿಸಲು ಚಿತ್ರತಂಡ 2 ವರ್ಷಗಳಷ್ಟು ದೀರ್ಘ ಸಮಯ ತೆಗೆದುಕೊಂಡಿತ್ತು. ಚಾಪ್ಟರ್ 2 ಬೇಗ ರೆಡಿಯಾಗುತ್ತಿರುವುದಕ್ಕೆ ಕಾರಣ, ಚಾಪ್ಟರ್ 2ನ ಬಹುತೇಕ ಶೂಟಿಂಗ್ ಮೊದಲೇ ಮುಗಿದಿತ್ತು ಎನ್ನಲಾಗುತ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಟೀಂನಲ್ಲಿ ಈಗಾಗಲೇ ಯಶ್, ಶ್ರೀನಿಧಿ ಶೆಟ್ಟಿ, ಅನಂತ್ ನಾಗ್, ಮಾಳವಿಕ, ವಸಿಷ್ಠ ಸಿಂಹ ಮೊದಲಾದವರೆಲ್ಲ ಇದ್ದಾರೆ. ಈಗ ಹೊಸದಾಗಿ ಸಂಜಯ್ ದತ್ ಜೊತೆಯಾಗಿದ್ದಾರೆ. ರವೀನಾ ಟಂಡನ್ ಚಿತ್ರತಂಡವನ್ನು ಸೇರಿಕೊಳ್ಳಬೇಕಿದೆ.
ಏಪ್ರಿಲ್ ಅಂದ್ರೆ ಉಳಿದಿರೋದು ಇನ್ನು ಏಳೇ ತಿಂಗಳು. ಏಪ್ರಿಲ್ ರಿಲೀಸ್ ಅನ್ನೋ ನಿರೀಕ್ಷೆ ಏನಾಗುತ್ತೋ ಏನೋ..