` ಅದೇ ಅಪ್ಪು.. ಅದೇ ಕಿಚ್ಚ.. ಅದೇ ಅಪ್ಪುಗೆ.. ಆಗ ಮಾಸ್ಟರ್.. ಈಗ ಮಿಸ್ಟರ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep puneeth bromance is a must watch
Sudeep, Puneeth at Pailwan Audio Launch

ಪೈಲ್ವಾನ್ ಚಿತ್ರದ ಆಡಿಯೋ ರಿಲೀಸ್ ಅದ್ಧೂರಿಯೋ.. ಅದ್ಧೂರಿ. ಈ ಅದ್ಧೂರಿತನದಲ್ಲಿ ಅಭಿಮಾನಿಗಳ ಹೃದಯ ಕದ್ದ ಇನ್ನೊಂದು ದೃಶ್ಯ ಕಿಚ್ಚ ಸುದೀಪ್ ಮತ್ತು ಪುನೀತ್ ರಾಜ್‍ಕುಮಾರ್ ಅವರ ಅಪ್ಪುಗೆ.

ಸುದೀಪ್ ಮತ್ತು ಪುನೀತ್.. ಇಬ್ಬರೂ ಬಾಲ್ಯದ ಗೆಳೆಯರು. ಚಿತ್ರದ ಆಡಿಯೋ ಲಾಂಚ್‍ನಲ್ಲಿ ಅವರಿಬ್ಬರೂ ಚಿಕ್ಕ ವಯಸ್ಸಿನ ಹುಡುಗರಾಗಿದ್ದಾಗ ಅಪ್ಪಿಕೊಂಡಿದ್ದ ಫೋಟೋವೊಂದನ್ನು ಪ್ರದರ್ಶಿಸಲಾಯ್ತು. ಅದೇ ಸ್ಟೈಲಿನಲ್ಲಿ ಮತ್ತೆ ಸುದೀಪ್, ಅಪ್ಪು ಅಪ್ಪಿಕೊಂಡು ಖುಷಿಪಟ್ಟರು.

ಸುದೀಪ್ ನನ್ನ ಗೆಳೆಯ. ನಾನು ಈ ಆಡಿಯೋವನ್ನು ಒಬ್ಬ ಪ್ರೇಕ್ಷಕನಾಗಿ ರಿಲೀಸ್ ಮಾಡುತ್ತಿದ್ದೇನೆ ಎಂದು ಪುನೀತ್ ಹೇಳಿದರೆ, ಪುನೀತ್ ಜೊತೆ ನಟಿಸುವ ಆಸೆಯಿದೆ. ಆದರೆ.. ಅವರ ಜೊತೆ ಡ್ಯಾನ್ಸ್ ಮಾಡೋದೇ ಕಷ್ಟ ಎಂದು ಕಿಚಾಯಿಸಿದರು ಕಿಚ್ಚ ಸುದೀಪ್.

ಪುನೀತ್ ಮತ್ತು ಸುದೀಪ್ ಇಬ್ಬರೂ.. ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ.. ಹಾಡನ್ನು ಒಟ್ಟಿಗೇ ಹಾಡಿ ರಂಜಿಸಿದರು. ಪೈಲ್ವಾನ್ ಸಿನಿಮಾ ಸೆಪ್ಟೆಂಬರ್ 12ರಂದು ರಿಲೀಸ್ ಆಗುತ್ತಿದೆ. ಸ್ವಪ್ನಾ ಕೃಷ್ಣ ನಿರ್ಮಾಣದ ಚಿತ್ರಕ್ಕೆ ಹೆಬ್ಬುಲಿ ಕೃಷ್ಣ ನಿರ್ದೇಶಕ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.