ಪ್ರಿಯಾಮಣಿ, ಕಿಶೋರ್ ಕಾಂಬಿನೇಷನ್ ಸಿನಿಮಾ ನನ್ನ ಪ್ರಕಾರದಲ್ಲಿ ಅತ್ಯಂತ ಪ್ರಮುಖ ಪಾತ್ರ ಮಾಡಿರುವುದು ಮಯೂರಿ. ವಿಸ್ಮಯ ಅನ್ನೋ ಆಕೆಯ ಪಾತ್ರದ ಸುತ್ತಲೇ ಇಡೀ ಕಥೆ ಸುತ್ತುತ್ತದೆ. ಕಥೆಯ ಕೇಂದ್ರಬಿಂದುವೇ ವಿಸ್ಮಯ.
ನನ್ನ ಪ್ರಕಾರ ವಿಸ್ಮಯ ಅನ್ನೋ ಪಾತ್ರವೇ ಒಂದು ಮ್ಯಾಜಿಕ್. ನನಗೆ ಆ ಪಾತ್ರ ಸಿಕ್ಕಿದ್ದು ಕೂಡಾ ಒಂದು ಮ್ಯಾಜಿಕ್. ಮೊದಲು ನಾನು ಈ ಪಾತ್ರ ಮಾಡಬಹುದಾ ಎಂದು ಯೋಚಿಸಿ, ಆಮೇಲೆ ಖುಷಿಯಿಂದ ಮಾಡಿದೆ. ಪಾತ್ರದಲ್ಲಿ ತುಂಬಾ ಹೊಸತನವಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ಮಯೂರಿ.
ವಿನಯ್ ಬಾಲಾಜಿ ನಿರ್ದೇಶನದ ಚೊಚ್ಚಲ ಸಿನಿಮಾವಿದು. ಮಲ್ಟಿಲೇಯರ್ ಥ್ರಿಲ್ಲರ್ ಸಿನಿಮಾದ ಟ್ರೇಲರ್ ಕುತೂಹಲ ಹುಟ್ಟಿಸಿದೆ. ಆಗಸ್ಟ್ 23ರಂದು ಸಿನಿಮಾ ರಿಲೀಸ್ ಆಗುತ್ತಿದೆ.