ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಮುಕ್ತಾಯವಾಗಿದೆ. ಕತಾರ್‍ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರತಾರೆಯರು ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದ್ದಾರೆ. ಸೈಮಾ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ ನೋಡಿ. ಅತೀ ಹೆಚ್ಚು ಪ್ರಶಸ್ತಿ ಪಡೆದಿರುವುದು ಕೆಜಿಎಫ್. ಅಯೋಗ್ಯ 2ನೇ ಸ್ಥಾನದಲ್ಲಿದೆ.
ಅತ್ಯುತ್ತಮ ನಾಯಕ ನಟ - ಯಶ್: ಕೆಜಿಎಫ್ ಚಾಪ್ಟರ್ 1
ಅತ್ಯುತ್ತಮ ನಾಯಕ ನಟಿ - ರಚಿತಾ ರಾಮ್ : ಅಯೋಗ್ಯ
ಅತ್ಯುತ್ತಮ ನಿರ್ದೇಶಕ - ಪ್ರಶಾಂತ್ ನೀಲ್ : ಕೆಜಿಎಫ್ ಚಾಪ್ಟರ್ 1
ಅತ್ಯುತ್ತಮ ಹೊಸ ನಿರ್ದೇಶಕ - ಮಹೇಶ್ ಕುಮಾರ್ : ಅಯೋಗ್ಯ
ಅತ್ಯುತ್ತಮ ಹೊಸ ನಟ - ಡ್ಯಾನಿಷ್ ಸೇಠ್ : ಹಂಬಲ್ ಪೊಲಿಟಿಷಿಯನ್ ನೊಗ್ರಾಜ್
ಅತ್ಯುತ್ತಮ ಹೊಸ ನಟಿ - ಅನುಪಮಾ ಗೌಡ : ಆ ಕರಾಳ ರಾತ್ರಿ
ಅತ್ಯುತ್ತಮ ಹಾಸ್ಯ ನಟ - ಪ್ರಕಾಶ್ ತುಮಿನಾಡು : ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಅತ್ಯುತ್ತಮ ಪೋಷಕ ನಟ - ಅಚ್ಯುತ್ ಕುಮಾರ್
ಅತ್ಯುತ್ತಮ ಪೋಷಕ ನಟಿ - ಅರ್ಚನಾ : ಕೆಜಿಎಫ್ ಚಾಪ್ಟರ್ 1
ಅತ್ಯುತ್ತಮ ಖಳನಟ - ಧನಂಜಯ್ : ಟಗರು
ವಿಮರ್ಶಕರ ಪ್ರಶಸ್ತಿ- ಮಾನ್ವಿತಾ ಹರೀಶ್ : ಟಗರು
ಅತ್ಯುತ್ತಮ ಗೀತ ರಚನೆ - ಚೇತನ್ ಕುಮಾರ್ : ಅಯೋಗ್ಯ (ಏನಮ್ಮಿ.. ಏನಮ್ಮಿ..)
ಅತ್ಯುತ್ತಮ ಗಾಯಕಿ - ಅನನ್ಯಾ ಭಟ್ : ಟಗರು (ಹೋಲ್ಡನ್ ಹೋಲ್ಡಾನ್..)
ಅತ್ಯುತ್ತಮ ಛಾಯಾಗ್ರಹಣ - ಭುವನ್ ಗೌಡ : ಕೆಜಿಎಫ್ ಚಾಪ್ಟರ್ 1
ಅತ್ಯುತ್ತಮ ಸಂಗೀತ ನಿರ್ದೇಶನ - ರವಿ ಬಸ್ರೂರ್ : ಕೆಜಿಎಫ್ ಚಾಪ್ಟರ್ 1