ಪ್ರಿಯಾಮಣಿ, ಕಿಶೋರ್ ಪ್ರಧಾನ ಪಾತ್ರದಲ್ಲಿರುವ ನನ್ನ ಪ್ರಕಾರ ಚಿತ್ರದ ಆಡಿಯೋ ಮತ್ತು ಟ್ರೇಲರ್ ರಿಲೀಸ್ ಮಾಡಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಚಿತ್ರದ ಟ್ರೇಲರ್ನ್ನು ಮೆಚ್ಚಿಕೊಂಡಿದ್ದಾರೆ.
ವಿನಯ್ ಬಾಲಾಜಿ ನಿರ್ದೇಶನದ ಮೊದಲ ಚಿತ್ರ ನನ್ನ ಪ್ರಕಾರ. ಕಿಶೋರ್-ಪ್ರಿಯಾಮಣಿ, ಮಯೂರಿ-ಅರ್ಜುನ್ ಯೋಗಿ, ನಿರಂಜನ್ ದೇಶಪಾಂಡೆ-ವಿಸ್ಮಯಾ ಸುರೇಶ್.. ಈ ಮೂರೂ ಜೋಡಿಗಳದ್ದು ಪ್ರತ್ಯೇಕ ಕಥೆ. ಆದರೆ, ಆ ಮೂರೂ ಕಥೆಗಳು ಕೊನೆಗೆ ಕನೆಕ್ಟ್ ಆಗುತ್ತವೆ. ಇದೊಂದು ಕಂಪ್ಲೀಟ್ ಸಸ್ಪೆನ್ಸ್ ಥ್ರಿಲ್ಲರ್ ಎನ್ನುತ್ತಾರೆ ವಿನಯ್ ಬಾಲಾಜಿ.
ತಾವು ನಟಿಸುವ ಪ್ರತಿ 3 ಚಿತ್ರಗಳಲ್ಲಿ, ಒಮ್ಮೆ ಪೊಲೀಸ್ ಅಧಿಕಾರಿಯಾಗುವ ಕಿಶೋರ್ ಕೂಡಾ ಚಿತ್ರದ ಪಾತ್ರದ ಬಗ್ಗೆ ಖುಷಿಯಾಗಿ ಹೇಳಿಕೊಂಡರು. ಚಿತ್ರ ಮುಂದಿನ ವಾರ ಪ್ರೇಕ್ಷಕರ ಮುಂದೆ ಬರಲಿದೆ.