ಪ್ರಿಯಾಮಣಿ ಯಾವಾಗ ಡಾಕ್ಟರ್ ಆದ್ರು.. ಅವರು ಡಿಗ್ರಿ ತೆಗೆದುಕೊಂಡಿರೋದು ಬಿಎ ಸೈಕಾಲಜಿಯಲ್ಲಿ. ಡಾಕ್ಟರ್ ಹೇಗಾದ್ರು ಅನ್ನೋ ಕನ್ಫ್ಯೂಸ್ ಬೇಡ. ಅವರು ಡಾಕ್ಟರ್ ಆಗಿರೋದು ನನ್ನ ಪ್ರಕಾರ ಸಿನಿಮಾದಲ್ಲಿ. ಡಾ.ಅಮೃತಾ ಎಂಬ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ ಪ್ರಿಯಾಮಣಿ.
ಕ್ಲಿಷ್ಟಕರವಾಗಿರೋ ಕೇಸ್ವೊಂದಕ್ಕೆ ತಿರುವು ನೀಡೋ ಡಾಕ್ಟರ್ ಪಾತ್ರ ನನ್ನದು. ಚಿತ್ರದಲ್ಲಿ ಒಟ್ಟು 4 ಕಥೆಗಳಿವೆ. ಒಂದೊಂದು ಕಥೆಗೂ ತಿರುವುಗಳಿವೆ. ಹೊಸ ಬಗೆಯ ಕಥೆ, ಮೇಕಿಂಗ್ ಹಾಗೂ ಕಥೆ ಹೇಳುವ ಶೈಲಿ ವಿಭಿನ್ನವಾಗಿದೆ ಎನ್ನುತ್ತಾರೆ ಪ್ರಿಯಾಮಣಿ.
ಚಿತ್ರಕ್ಕೆ ವಿನಯ್ ಬಾಲಾಜಿ ನಿರ್ದೇಶಕ. ಮೊದಲ ಪ್ರಯತ್ನದಲ್ಲೇ ಹೊಸ ಪ್ರಯೋಗ ಮಾಡಿದ್ದಾರೆ ವಿನಯ್ ಬಾಲಾಜಿ. ಕಿಶೋರ್, ಮಯೂರಿ ನಟಿಸಿರುವ ಥ್ರಿಲ್ಲರ್ ಸಿನಿಮಾ ನನ್ನ ಪ್ರಕಾರ.