` ಕೋಮಲ್ ಮೇಲೆ ರೌಡಿ ಹಲ್ಲೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
actor komal assualted by miscreants
Actor Komal Assaulted by Miscreants

ನಟ ಕೋಮಲ್ ಮೇಲೆ ರೌಡಿಯೊಬ್ಬ ಹಲ್ಲೆ ನಡೆಸಿದ್ದಾನೆ. ಮಲ್ಲೇಶ್ವರದ ಸಂಪಿಗೆ ರಸ್ತೆಯ ಅಂಡರ್‍ಪಾಸ್ ಬಳಿ ವಿಜಯ್ ಎಂಬ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಬೈಕ್‍ಗೆ ಕಾರ್ ತಾಗಿದ್ದಕ್ಕೆ ಶುರುವಾದ ಜಗಳ, ಹೊಡೆದಾಟಕ್ಕೆ ತಿರುಗಿದೆ. ಮಾತಿನ ಚಕಮಕಿ ಜೋರಾದಾಗ ಬೈಕ್ ಸವಾರ ವಿಜಯ್ ಅವಾಚ್ಯ ಶಬ್ಧಗಳಿಂದ ಬೈದಿದ್ದಾನೆ. ಆಟೋ ಚಾಲಕರೊಬ್ಬರು ಕೋಮಲ್‍ರನ್ನು ಸಮಾಧಾನಪಡಿಸಿ ಕಾರ್ ಬಳಿ ಕರೆದುಕೊಂಡು ಹೋದ ನಂತರ ಬೈಕ್ ಸವಾರನ ಮಾತು ಇನ್ನಷ್ಟು ಜೋರಾಗಿದೆ. ಅವಾಚ್ಯ ಶಬ್ಧಗಳಿಗೆ ತಿರುಗಿದೆ. ಮತ್ತೆ ಗಲಾಟೆ ಶುರುವಾಗಿ ವಿಜಯ್ ಕೋಮಲ್ ಮುಖಕ್ಕೆ ಗುದ್ದಿದ್ದಾನೆ. ಸ್ಥಳೀಯ ಆಟೋ ಚಾಲಕರೇ ಕೋಮಲ್‍ರನ್ನು ರಕ್ಷಿಸಿದ್ದಾರೆ.

ಕೋಮಲ್ ಮೂಗು, ತುಟಿಯಲ್ಲಿ ರಕ್ತ ಬಂದಿದ್ದು ಚಿಕಿತ್ಸೆ ಪಡೆದಿದ್ದಾರೆ. ಕೋಮಲ್ ಅಣ್ಣ ಜಗ್ಗೇಶ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ರೌಡಿಗಳನ್ನು ಸುಮ್ಮನೆ ಬಿಡೋದಿಲ್ಲ ಎಂದು ಗುಡುಗಿದ್ದಾರೆ.

ಹೇ.. ನಿಂದು ಜಾಸ್ತಿ ಆಯ್ತು ಎಂದು ಗಲಾಟೆ ತೆಗೆದ ಬೈಕ್ ಸವಾರ ವಿಜಯ್, ಈ ನಟರಿಗೆ ದುರಹಂಕಾರ ಜಾಸ್ತಿ, ಅದಕ್ಕೇ ಹೊಡೆದೆ ಎಂದು ಪೊಲೀಸರ ಎದುರು ಹೇಳಿಕೆ ಕೊಟ್ಟಿದ್ದಾನಂತೆ.  2017, ಆಗಸ್ಟ್ 14ರಂದು ನಟ ಜಗ್ಗೇಶ್ ಪುತ್ರ ಗುರುದತ್ ಮೇಲೆ ಶಿವಶಂಕರ್ ಎಂಬ ವ್ಯಕ್ತಿ ಚಾಕುವಿನಿಂದ ಹಲ್ಲೆ ನಡೆಸಿದ್ದ. ಈಗ ಕೋಮಲ್ ಮೇಲೆ ಹಲ್ಲೆಯಾಗಿದೆ.

Related Articles :-

Komal Assaulted By Miscreants In Bangalore

Kurukshetra Celebrity Show Gallery

Rightbanner02_gimmick_inside

Nanna Prakara Movie Images