` ರವಿ ಮಗನ ಸಿನಿಮಾ ಅಂದ್ಕೊಂಡು ಬನ್ನಿ.. ಆದರೆ.. - ವಿಕ್ರಮ್ ರವಿಚಂದ್ರನ್ ಕಾನ್ಫಿಡೆನ್ಸ್ ನೋಡಿದ್ರಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vikram ravichandran's trivikrama speciality
Trivikrama

ರವಿಚಂದ್ರನ್ ಅವರ 2ನೇ ಮಗ ವಿಕ್ರಂ ಅಭಿನಯದ ಮೊದಲ ಸಿನಿಮಾ ಶುರುವಾಗಿದೆ. ಸಹನಾ ಮೂರ್ತಿ ನಿರ್ದೇಶನದ ತ್ರಿವಿಕ್ರಮ ಚಿತ್ರಕ್ಕೆ ಚಾಲನೆ ದೊರೆತಿದೆ. ಮುಹೂರ್ತದ ನಂತರ ವಿಕ್ರಮ್ ಮಾತು ಕೇಳಿದರೆ ಇಷ್ಟವಾಗೋದು ಅವರ ಕಾನ್ಫಿಡೆನ್ಸು.

ಇದು ನನ್ನ ಮೊದಲ ಸಿನಿಮಾ. ಸಿನಿಮಾಗೆ ಎಲ್ಲ ತಯಾರಿ ಮಾಡಿಕೊಂಡೇ ಬಂದಿದ್ದೇನೆ. ಪ್ರೇಕ್ಷಕರು ಬರುವಾಗ ಇದು ರವಿಚಂದ್ರನ್ ಮಗನ ಸಿನಿಮಾ ಎಂದುಕೊಂಡೇ ಬರಲಿ, ಹೋಗುವಾಗ ಇದು ವಿಕ್ರಂ ಸಿನಿಮಾ ಎಂದರೆ ಸಾಕು. ಅದೇ ನನಗೆ ದೊಡ್ಡ ಯಶಸ್ಸು ಎಂದಿದ್ದಾರೆ ವಿಕ್ರಮ್.

ಚಿತ್ರದಲ್ಲಿ ಹೈವೋಲ್ಟೇಜ್ ಲವ್ ಸ್ಟೋರಿ ಇದೆಯಂತೆ. ನಿನಗೆ ಎಷ್ಟು ಗೊತ್ತಿದೆಯೋ ಅಷ್ಟು ಮಾಡು. ಒತ್ತಡ ತೆಗೆದುಕೊಳ್ಳಬೇಡ ಎಂದಿದ್ದಾರಂತೆ ರವಿಚಂದ್ರನ್. ವಿಕ್ರಂಗೆ ಜೋಡಿಯಾಗಿ ಆಕಾಂಕ್ಷಾ ನಟಿಸುತ್ತಿದ್ದಾರೆ.