ಕೆಜಿಎಫ್-2ನಲ್ಲಿ ಯಶ್ ಪಾತ್ರಕ್ಕೆ ಅದೂ ರಾಕಿ ಭಾಯ್ ಪಾತ್ರಕ್ಕೆ ತಮಿಳು ನಟ ಸರಣ್ ಶಕ್ತಿ ಎಂಟ್ರಿಯಾಗಿದ್ದಾರೆ. ಕನ್‍ಫ್ಯೂಸ್ ಬಿಟ್ಹಾಕಿ. ಮೂಲಗಳ ಪ್ರಕಾರ ಸರಣ್ ಶಕ್ತಿ, ಹದಿಹರೆಯದ ರಾಕಿಭಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಚಿತ್ರತಂಡದಿಂದ ಹೊರಬಿದ್ದಿರೋ ಸೀಕ್ರೆಟ್ ಮಾಹಿತಿ.
ವಡಾ ಚೆನ್ನೈ, ಸಗಾ ಚಿತ್ರಗಳ ಮೂಲಕ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡ ಸರಣ್ ಶಕ್ತಿ, ಕೆಜಿಎಫ್-2 ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದನ್ನು ಖುಷಿಯಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗುತ್ತಿದೆ. ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ, ಈ ವರ್ಷದ ಭಾರತ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು.