ಕೆಜಿಎಫ್ ಚಿತ್ರಕ್ಕೆ 2 ಪ್ರಶಸ್ತಿ ಸಂದಿವೆ. ಸಾಹಸ ನಿರ್ದೇಶನಕ್ಕೆ ಹಾಗೂ ಸ್ಪೆಷಲ್ ಎಫೆಕ್ಟ್ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಸ್ವರ್ಣಕಮಲ ಲಭಿಸಿದೆ.
ನಾತಿಚರಾಮಿ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ, ಸಂಕಲನ, ಸಾಹಿತ್ಯ, ಹಿನ್ನೆಲೆ ಗಾಯಕಿ ಹಾಗೂ ನಟಿ ಶ್ರುತಿ ಹರಿಹರನ್‍ಗೆ ವಿಶೇಷ ಉಲ್ಲೇಖ ಪ್ರಮಾಣ ಪತ್ರ ಸಿಕ್ಕಿದೆ. ಒಂದಲ್ಲ ಎರಡಲ್ಲಾ ಚಿತ್ರಕ್ಕೆ ನರ್ಗಿಸ್ ದತ್ ರಾಷ್ಟ್ರೀಯ ಭಾವೈಕ್ಯತಾ ಚಿತ್ರ ಪ್ರಶಸ್ತಿ ಹಾಗೂ ಪಿ.ವಿ.ರೋಹಿತ್‍ಗೆ ಅತ್ಯುತ್ತಮ ಬಾಲನಟ ಪ್ರಶಸ್ತಿ
ಮೂಕಜ್ಜಿಯ ಕನಸುಗಳು ಚಿತ್ರ, ರಾಷ್ಟ್ರೀಯ ಆರ್ಕೈವ್‍ಗೆ, ಅಗ್ರ್ಯಾನಿಕ್ ಸೇಜ್ ಆಫ್ ಇಂಡಿಯಾ ಸರಳ ವಿರಳಕ್ಕೆ ಅತ್ಯುತ್ತಮ ಶೈಕ್ಷಣಿಕ ಸಿನಿಮಾ (ಚಲನಚಿತ್ರೇತರ ವಿಭಾಗ)ಪ್ರಶಸ್ತಿ ಸಂದಿವೆ. ಇದು ಕನ್ನಡದ ಮಟ್ಟಿಗಂತೂ ಅತ್ಯದ್ಭುತ ದಾಖಲೆ. ಇಷ್ಟೊಂದು ಪ್ರಶಸ್ತಿಗಳನ್ನು ಇದುವರೆಗೆ ಕನ್ನಡ ಚಿತ್ರರಂಗ ಪಡೆದೇ ಇರಲಿಲ್ಲ.
ಎಲ್ಲ ಪ್ರಶಸ್ತಿ ವಿಜೇತರಿಗೆ ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್ ಅಭಿನಂದನೆ ಸಲ್ಲಿಸಿದ್ದಾರೆ.