ನನಗೆ ಇದು ಒಂದು ಸೌಭಾಗ್ಯವೂ ಹೌದು ಎಂದು ದರ್ಶನ್ ಸ್ವತಃ ನೆನಪಿಸಿಕೊಳ್ಳುವವರೆಗೆ ಉಳಿದವರು ಆ ಬಗ್ಗೆ ಯೋಚನೆ ಮಾಡಿರಲಿಲ್ಲ. ಕುರುಕ್ಷೇತ್ರ ಸಿನಿಮಾವನ್ನು ಎಲ್ಲರೂ ನೋಡಿ ಹೊಗಳುತ್ತಿದ್ದರೆ, ದರ್ಶನ್ ಮಾತ್ರ ಮತ್ತೊಮ್ಮೆ ಎಲ್ಲರೂ ನೋಡಿದ ಮೇಲೆ ಸಿನಿಮಾ ನೋಡುತ್ತೇನೆ ಎನ್ನುತ್ತಿದ್ದರು. ಅಂಬರೀಷ್‍ರನ್ನು ನೆನಪಿಸಿಕೊಂಡು ಭಾವುಕರಾದ ದರ್ಶನ್ ನನ್ನ ಅಭಿನಯದ ಮೊದಲ ಚಿತ್ರದಲ್ಲಿ ಹಾಗೂ ಅವರ ಕೊನೆಯ ಚಿತ್ರದಲ್ಲಿ ನಾನಿದ್ದೆ ಎನ್ನುವುದೇ ನನಗೆ ಸೌಭಾಗ್ಯ ಎಂದರು.
ದರ್ಶನ್ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ದೇವರ ಮಗ ಚಿತ್ರಕ್ಕೆ. ಆ ಚಿತ್ರದಲ್ಲಿ ಅಂಬರೀಷ್ ಮತ್ತು ಶಿವರಾಜ್‍ಕುಮಾರ್ ನಾಯಕರಾಗಿದ್ದರು. ಇನ್ನು ಅಂಬರೀಷ್ ಅಭಿನಯದ ಕೊನೆಯ ಚಿತ್ರ ಕುರುಕ್ಷೇತ್ರ. ಅಲ್ಲಿ ದರ್ಶನ್ ಹೀರೋ. ಈಗ ಕುರುಕ್ಷೇತ್ರ ಎಲ್ಲೆಡೆ ರಿಲೀಸ್ ಆಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ.