ಕುರುಕ್ಷೇತ್ರ ರಿಲೀಸ್ ಆಗುತ್ತಿರುವ ದಿನವೇ ಕುರುಕ್ಷೇತ್ರ ಹಬ್ಬ. ಹಿಂದೂಗಳಿಗೆಲ್ಲ ವರಮಹಾಲಕ್ಷ್ಮಿ ಹಬ್ಬವಾದರೆ ಡಿ ಬಾಸ್ ಅಭಿಮಾನಿಗಳಿಗೆ ಇದು ಕುರುಕ್ಷೇತ್ರ ಹಬ್ಬ. ಈ ಹಬ್ಬಕ್ಕೆ ತಯಾರಿಯೂ ಭರ್ಜರಿಯಾಗಿಯೇ ನಡೆಯುತ್ತಿದೆ.
ಈಗಾಗಲೇ ಆನ್‍ಲೈನ್ ಬುಕ್ಕಿಂಗ್ ಜೋರಾಗಿ ನಡೆದಿದ್ದರೆ, ಥಿಯೇಟರುಗಳ ಎದುರು ಕಟೌಟ್‍ಗಳು ರಾರಾಜಿಸತೊಡಗಿವೆ. ದರ್ಶನ್, ಅಂಬರೀಷ್ ಕಟೌಟ್‍ಗಳು ಹೆಚ್ಚಾಗಿ ಕಂಡು ಬರುತ್ತಿವೆ.
ಮುನಿರತ್ನ ನಿರ್ಮಾಣ, ನಾಗಣ್ಣ ನಿರ್ದೇಶನದ ಕುರುಕ್ಷೇತ್ರ ದರ್ಶನ್ ವೃತ್ತಿ ಜೀವನದ 50ನೇ ಸಿನಿಮಾ. ಅಂಬರೀಷ್ ಅಭಿನಯದ ಕೊನೆಯ ಹಾಗೂ ರವಿಚಂದ್ರನ್ ಅಭಿನಯದ ಮೊದಲ ಪೌರಾಣಿಕ ಚಿತ್ರ ಕುರುಕ್ಷೇತ್ರ. ಹಬ್ಬಕ್ಕೆ ರೆಡಿ.