ಮುನಿರತ್ನ ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆದ ಮೇಲೆ ಚಿತ್ರಕ್ಕೆ ಡಬ್ಬಿಂಗ್ ಮಾಡಿರುವ ನಿಖಿಲ್, ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲ ಎಂಬ ಆರೋಪಗಳಿವೆ. ಅದಕ್ಕೆ ತಕ್ಕಂತೆ ಚಿತ್ರದ ಆಡಿಯೋ ರಿಲೀಸ್ ಹಾಗೂ ಸುದ್ದಿಗೋಷ್ಠಿಗಳಿಂದ ದೂರವೇ ಇದ್ದಾರೆ ನಿಖಿಲ್. ಇದರ ಹಿಂದೆ ರಾಜಕೀಯ ಕಾರಣಗಳಿವೆಯೇ ಎಂದರೆ ನಿಖಿಲ್ ನೋ ಅಂತಾರೆ.
ಇದೆಲ್ಲದರ ನಡುವೆಯೇ ನಿಖಿಲ್ ಅವರಿಗಾಗಿಯೇ ರಾಕ್‍ಲೈನ್ ಮಾಲ್‍ನಲ್ಲಿ ಮುನಿರತ್ನ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು.
ಸಿನಿಮಾ ನೋಡಿದ ನಂತರ ಮಾತನಾಡಿದ ನಿಖಿಲ್ ಈ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದೇ ನನ್ನ ಅದೃಷ್ಟ, ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ ಎಂದು ಹೇಳಿದ್ದಾರೆ.