ಕ್ರೇಜಿಸ್ಟಾರ್ ರವಿಚಂದ್ರನ್ ಅವರ 2ನೇ ಮಗ ವಿಕ್ರಮ್ ಅಭಿನಯದ ಮೊದಲ ಸಿನಿಮಾಗೆ ಇನ್ನೊಬ್ಬ ನಾಯಕಿ ಎಂಟ್ರಿ ಕೊಟ್ಟಿದ್ದಾರೆ. ಪಂಚತಂತ್ರದ ಗ್ಲಾಮರ್ ಗೊಂಬೆ ಅಕ್ಷರಾ ಗೌಡ, ವಿಕ್ರಂಗೆ ಇನ್ನೊಬ್ಬ ನಾಯಕಿ. ಈಗಾಗಲೇ ಆಕಾಂಕ್ಷಾ ಸಿಂಗ್ ನಾಯಕಿಯಾಗಿದ್ದು, 2ನೇ ನಾಯಕಿಯಾಗಿ ಅಕ್ಷರಾ ಗೌಡ ಬಂದಿದ್ದಾರೆ.
ಚಿತ್ರದಲ್ಲಿ ನನಗೆ ಟ್ರೆಡಿಷನಲ್ ಮತ್ತು ಗ್ಲ್ಯಾಮರಸ್ ಎರಡೂ ರೀತಿ ಇರುವ ಪಾತ್ರವಿದೆ. ಉಳಿದಂತೆ ಕಥೆ ಮತ್ತು ಪಾತ್ರದ ಬಗ್ಗೆ ಹೆಚ್ಚು ಹೇಳುವಂತಿಲ್ಲ. ನಾನಂತೂ ಎಕ್ಸೈಟ್ಮೆಂಟ್ನಿಂದ ಕಾಯುತ್ತಿದ್ದೇನೆ ಎಂದಿದ್ದಾರೆ ಅಕ್ಷರಾ ಗೌಡ.
ನಿರ್ದೇಶಕ ಸಹನಾಮೂರ್ತಿ ಚಿತ್ರವನ್ನು ಆಗಸ್ಟ್ 10ರಂದು ಶುರು ಮಾಡಲಿದ್ದು, ಸೋಮಶೇಖರ್ ಮತ್ತು ಸುರೇಶ್ ನಿರ್ಮಾಪಕರು.