ಪುರಿ ಜಗನ್ನಾಥ್, ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ಡೈರೆಕ್ಟರ್. ತೆಲುಗು, ಕನ್ನಡ ಹಾಗೂ ತಮಿಳಿನಲ್ಲಿ ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ನಿರ್ದೇಶಕ. ಸದ್ಯಕ್ಕೆ ಇಸ್ಮಾರ್ಟ್ ಶಂಕರ್ ಸಕ್ಸಸ್‍ನಲ್ಲಿ ತೇಲುತ್ತಿರುವ ಪುರಿ ಜಗನ್ನಾಥ್, ಕನ್ನಡ ಸಿನಿಮಾ ಮಾಡ್ತಾರಾ..? ಅದೂ ಯಶ್ ಜೊತೆಗೆ.
ಇಂಥಾದ್ದೊಂದು ಸುದ್ದಿ ಗಾಂಧಿನಗರದಲ್ಲಿ ಸರಿದಾಡುತ್ತಿದೆ. ಪುರಿ ಜಗನ್ನಾಥ್, ಯಶ್ ಜೊತೆ ಜನಗಣಮನ ಎಂಬ ಸಿನಿಮಾ ಮಾಡಲು ಮುಂದಾಗಿದ್ದಾರಂತೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ಮಾಡುವುದು ಪುರಿ ಜಗನ್ನಾಥ್ ಪ್ಲಾನ್. ಈ ಕುರಿತು ಬೆಂಗಳೂರಿನಲ್ಲಿಯೇ ಮಾತುಕತೆ ಕೂಡಾ ನಡೆದಿದೆಯಂತೆ. ಕೆಜಿಎಫ್ ನಂತರ ಯಶ್ ಮಾರ್ಕೆಟ್ ಪ್ಯಾನ್ ಇಂಡಿಯಾ ಮಟ್ಟಕ್ಕೆ ವಿಸ್ತರಿಸಿರುವುದು ಇದಕ್ಕೆ ಕಾರಣ.
ಹೌದು, ನಾವು ಸಿನಿಮಾ ಮಾಡುತ್ತಿರುವುದು ಸತ್ಯ ಎಂದು ಪುರಿ ಜಗನ್ನಾಥ್ ಆಗಲೀ, ಯಶ್ ಆಗಲೀ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ.