` ಉ.ಪ್ರದೇಶ ಪೊಲೀಸರು ಬಿಟ್ಟ KGF ಅಸ್ತ್ರ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
up police inspired by kgf
UP Police Inspired By KGF

ಕೆಜಿಎಫ್, ಕನ್ನಡದಲ್ಲಷ್ಟೇ ಅಲ್ಲ, ಹಿಂದಿಯಲ್ಲೂ ದೊಡ್ಡ ಮಟ್ಟದಲ್ಲಿ ಸೌಂಡು ಮಾಡಿದ ಸಿನಿಮಾ. ಕೆಜಿಎಫ್ ನೋಡಿದವರು ಚಾಪ್ಟರ್-2 ಯಾವಾಗ ಎಂದು ನೋಡುತ್ತಿದ್ದರೆ, ಉ.ಪ್ರದೇಶ ಪೊಲೀಸರು ಕೆಜಿಎಫ್ ಅನ್ನೋ ಟೈಟಲ್‍ನ್ನೇ ತಮ್ಮ ಜಾಗೃತಿ ಸಂದೇಶಕ್ಕೆ ಕ್ರಿಯೇಟಿವ್ ಆಗಿ ಬಳಸಿಕೊಂಡಿದ್ದಾರೆ.

K ಅಂದ್ರೆ Know the rules (ನಿಯಮ ತಿಳಿದುಕೊಳ್ಳಿ)

G ಅಂದ್ರೆ, Grip well (ಹಿಡಿತವಿರಲಿ)

F ಅಂದ್ರೆ, Focus  (ಕಣ್ಣು, ಮನಸ್ಸು ಒಂದೇ ಕಡೆ ಇರಲಿ) ಎಂಬರ್ಥ ಬರುವಂತೆ ಬೋರ್ಡ್ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ.

ಯಶ್, ಪ್ರಶಾಂತ್ ನೀಲ್ ಮತ್ತು ವಿಜಯ್ ಕಿರಗಂದೂರು ಎಲ್ಲರೂ ಖುಷಿ ಪಡಲೇಬೇಕಲ್ಲವೇ..