` ಕುರುಕ್ಷೇತ್ರದ ಅಭಿಮನ್ಯುಗೆ ಕೊನೆಗೂ ನಿಖಿಲ್ ಡಬ್ಬಿಂಗ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
nikhil kumarasewamy dubs for kurukshetra
Nikhil Kumaraswamy Dubs For Kurukshetra

ಕುರುಕ್ಷೇತ್ರ ಚಿತ್ರ ರಿಲೀಸ್ ಆಗೋಕೆ ಕೆಲವೇ ದಿನಗಳು ಬಾಕಿ. ಕನ್ನಡ ಚಿತ್ರರಂಗದ ಅತಿದೊಡ್ಡ ಚಿತ್ರವಾಗಿರುವ ಕುರುಕ್ಷೇತ್ರ ಚಿತ್ರವನ್ನು ದುರ್ಯೋಧನನ ಪಾತ್ರದ ಮೇಲೆ ಕೇಂದ್ರೀಕರಿಸಿ ಮಾಡಲಾಗಿದೆ. ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ, ಅಭಿಮನ್ಯುವಾಗಿ ನಟಿಸಿದ್ದಾರೆ. ಆದರೆ ಚಿತ್ರದ ಟ್ರೇಲರ್‍ನಲ್ಲಿ ಅಭಿಮನ್ಯುವಿನ ಪಾತ್ರಕ್ಕೆ ಯಾರದ್ದೋ ಧ್ವನಿ ಇತ್ತು.

ಅಭಿಮನ್ಯುವಿನ ಆಕ್ರೋಶವನ್ನು ಹೊರಹಾಕಲು ಆ ಧ್ವನಿಗೆ ಸಾಧ್ಯವಾಗಿರಲಿಲ್ಲ. ರಾಜಕಾರಣ, ಮಂಡ್ಯದಲ್ಲಿ ಮುಳುಗಿ ಹೋಗಿದ್ದ ನಿಖಿಲ್, ಡಬ್ಬಿಂಗ್ ಮಾಡಿರಲಿಲ್ಲ. ಬೇರೆಯವರಿಂದ ಡಬ್ಬಿಂಗ್ ಮಾಡಿಸಿ ರಿಲೀಸ್‍ಗೆ ಸಿದ್ಧರಾಗಿದ್ದರು ಮುನಿರತ್ನ. 

ನಿಖಿಲ್ ವಾಯ್ಸ್ ಬಗ್ಗೆ ಅಪಸ್ವರ ಕೇಳಿಬಂದ ಹಿನ್ನೆಲೆಯಲ್ಲಿ ಈಗ ನಿಖಿಲ್ ಸ್ವತಃ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ. ಡಬ್ಬಿಂಗ್ ನಂತರ ಕುರುಕ್ಷೇತ್ರ ಮತ್ತೊಮ್ಮೆ ಸೆನ್ಸಾರ್ ಆಗಬೇಕಾ..? ಗೊತ್ತಿಲ್ಲ. ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಡೇಟ್ ಅಂತೂ ಫಿಕ್ಸ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery