ಹೀರೋಗಳ ಹುಟ್ಟುಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡುವುದು ಸಾಮಾನ್ಯ ಸಂಗತಿ. ನಾಯಕರಿಗಾಗಿ ಹಾಡು, ಟ್ರೇಲರ್, ಪೋಸ್ಟರ್ ರಿಲೀಸ್ ಮಾಡುವುದಂತೂ ಮಾಮೂಲು. ಆದರೆ ನನ್ನ ಪ್ರಕಾರ ಚಿತ್ರತಂಡ ಪ್ರಿಯಾಮಣಿ ಮದುವೆ ವಾರ್ಷಿಕೋತ್ಸವಕ್ಕೆ ಸಿನಿಮಾ ರಿಲೀಸ್ ಮಾಡುತ್ತಿದೆ. ಮದುವೆಯಾದ ಮೇಲೆ ಪ್ರಿಯಾಮಣಿ ನಟಿಸಿರುವ ಮೊದಲ ಚಿತ್ರವೂ ಇದೇ.. ನನ್ನ ಪ್ರಕಾರ.
ಆಗಸ್ಟ್ 23ಕ್ಕೆ ಪ್ರಿಯಾಮಣಿ ವೆಡ್ಡಿಂಗ್ ಆ್ಯನಿವರ್ಸರಿ. ಆ ದಿನ ನನ್ನ ಪ್ರಕಾರ ಸಿನಿಮಾ ರಿಲೀಸ್ ಆಗಲಿದೆ. ಪ್ರಿಯಾಮಣಿ ಜೊತೆ ಚಿತ್ರದಲ್ಲಿ ಕಿಶೋರ್, ಮಯೂರಿ, ವೈಷ್ಣವಿ ಮೊದಲಾದವರು ನಟಿಸಿದ್ದಾರೆ.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ವಿನಯ್ ಬಾಲಾಜಿ ನಿರ್ದೇಶನದ ಚಿತ್ರವವನ್ನು ಜಿವಿಕೆ ಕಂಬೈನ್ಸ್ ನಿರ್ಮಾಣ ಮಾಡಿದೆ. ಗುರುರಾಜ್ ನಿರ್ಮಾಪಕರು.