` 50 ಡೇಸ್ ಸಂಭ್ರಮಕ್ಕೆ ಐ ಲವ್ ಯು ರೆಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
i love you movie team gears up for 50 days event
I Love You Movie Image

ಉಪೇಂದ್ರ, ರಚಿತಾ ರಾಮ್, ಸೋನು ಗೌಡ ಅಭಿನಯದ ಆರ್.ಚಂದ್ರು ನಿರ್ದೇಶನದ ಐ ಲವ್ ಯೂ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿದೆ. ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ರಿಲೀಸ್ ಆದ ಸಿನಿಮಾ ಆಗಸ್ಟ್ 2ಕ್ಕೆ 50 ದಿನ ಕಂಪ್ಲೀಟ್ ಮಾಡುತ್ತಿದೆ. ಈ ಗೆಲುವನ್ನು ವಿಶೇಷವಾಗಿ ಸೆಲಬ್ರೇಟ್ ಮಾಡಲು ಮುಂದಾಗಿದ್ದಾರೆ ನಿರ್ಮಾಪಕ ಆರ್.ಚಂದ್ರು.

ಅದೇ ದಿನ ಇಡೀ ಚಿತ್ರತಂಡಕ್ಕೆ ವಿಶೇಷ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಎಲ್ಲರಿಗೂ ನೆನಪಿನ ಕಾಣಿಕೆ ನೀಡಲಿದ್ದೇವೆ. ಈ ಚಿತ್ರ ಇನ್ನೂ ಕೆಲವು ಚಿತ್ರಗಳನ್ನು ನಿರ್ಮಿಸಲು ಧೈರ್ಯ ನೀಡಿದೆ ಎಂದಿದ್ದಾರೆ ಆರ್.ಚಂದ್ರು.