` ವರಮಹಾಲಕ್ಷ್ಮಿ ಹಬ್ಬಕ್ಕೆ ನಾಗಣ್ಣ V/S ನಾಗಣ್ಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
will it be naganna vs naganna this varamahalakshmi festival ?
Naganna

ಈ ವರಮಹಾಲಕ್ಷ್ಮಿ ಹಬ್ಬಕ್ಕೆ ಮುನಿರತ್ನ ಕುರುಕ್ಷೇತ್ರ. ಕನ್ನಡ ಚಿತ್ರರಂಗದ ದೊಡ್ಡ ಬಜೆಟ್‍ನ ಪೌರಾಣಿಕ ಸಿನಿಮಾ. ಹೆಚ್ಚೂ ಕಡಿಮೆ ಇಡೀ ಸ್ಯಾಂಡಲ್‍ವುಡ್ ತಾರೆಯರು ನಟಿಸಿರುವ ಚಿತ್ರವಿದು. ದರ್ಶನ್, ಅಂಬರೀಷ್, ರವಿಚಂದ್ರನ್‍ರಂತಹ ದಿಗ್ಗಜರು ನಟಿಸಿರುವ ಚಿತ್ರಕ್ಕೆ ನಾಗಣ್ಣ ನಿರ್ದೇಶನವಿದೆ.

ಆದರೆ, ಅದೇ ನಾಗಣ್ಣ ನಿರ್ದೇಶನದ ಗಿಮಿಕ್ ಸಿನಿಮಾ ಕೂಡಾ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಆಗಲು ಸಿದ್ಧವಾಗಿದೆ. ಇದೇ ಫೈನಲ್ ಆದರೆ, ವರಮಹಾಲಕ್ಷ್ಮಿ ಹಬ್ಬಕ್ಕೆ ಒಬ್ಬ ನಿರ್ದೇಶಕನ ಎರಡು ಚಿತ್ರಗಳು ಮುಖಾಮುಖಿಯಾಗಲಿವೆ.

ಹಿಂದೆಲ್ಲ ಒಬ್ಬನೇ ನಟನ ಎರಡು ಚಿತ್ರಗಳು ಒಂದೇ ದಿನ ರಿಲೀಸ್ ಆದ ದಾಖಲೆಗಳೂ ಇವೆ. ಆದರೆ, ಒಬ್ಬನೇ ನಿರ್ದೇಶಕನ ಎರಡು ಸಿನಿಮಾ ರಿಲೀಸ್ ದಾಖಲೆ.. ಬಹುಶಃ ಇದೇ ಮೊದಲಿರಬೇಕು.

Kaalidasa Kannada Mestru Pressmeet Gallery

Kabza Movie Launch Gallery