` ಅಪ್ಪುಗೆ ಅಭಿನಯ ಹೇಳಿಕೊಟ್ಟ ಗುರು ಯಾರು ಗೊತ್ತಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
puneeth rajkumar reveals who his acting guru is
Puneeth Rajkumar

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಬಾಲ್ಯದಲ್ಲೇ ನಟನೆಯಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ಅಪ್ಪು, ರಾಜ್ಯ ಪ್ರಶಸ್ತಿ, ಫಿಲಂಫೇರ್ ಸೇರಿದಂತೆ ಹಲವು ಪ್ರಶಸ್ತಿ ಪಡೆದಿದ್ದಾರೆ. ಅಭಿನಯದಿಂದಲೇ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿರುವ ಪುನೀತ್‍ಗೆ ಅಭಿನಯ ಹೇಳಿಕೊಟ್ಟ ಗುರು ಯಾರು..?

ಅದು ತಂದೆ ಡಾ.ರಾಜ್ ಅಲ್ಲ, ಅಣ್ಣ ಶಿವಣ್ಣ ಅಥವಾ ರಾಘವೇಂದ್ರ ಅಲ್ಲ. ಅದು ಹೊನ್ನವಳ್ಳಿ ಕೃಷ್ಣ. ಇದನ್ನು ಸ್ವತಃ ಪುನೀತ್ ಅವರೇ ಹೇಳಿಕೊಂಡಿದ್ದಾರೆ.

ನಾನು ಚಿಕ್ಕ ವಯಸ್ಸಿನಲ್ಲಿ ನಟಿಸುವಾಗ ಏನು ಮಾಡಬೇಕು, ಹೇಗೆ ಮಾಡಬಾರದು, ಅಭಿನಯ ಹೀಗೇ ಇರಬೇಕು ಎಂದು ಹೇಳಿಕೊಟ್ಟವರು ಹಿರಿಯ ನಟರಾದ ಹೊನ್ನವಳ್ಳಿ ಕೃಷ್ಣ ಎಂದು ಹೇಳಿಕೊಂಡಿದ್ದಾರೆ ಪುನೀತ್. ಅದೂ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ.

ಬಾಲನಟನಾಗಿದ್ದಾಗ ಅಭಿನಯಿಸೋಕೆ ಯಾವ ಭಯವೂ ಇರಲಿಲ್ಲ. ಆದರೆ, ಹೀರೋ ಆಗಿ ಅಪ್ಪು ಚಿತ್ರದಲ್ಲಿ ನಟಿಸುವಾಗ ಸ್ವಲ್ಪ ಭಯವಾಗಿತ್ತು ಎಂದಿರುವ ಪುನೀತ್, ಹೀರೋ ಆದ ಮೇಲೆ ಆ ಭಯ ಇನ್ನೂ ಇದೆ ಎಂದಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery