ಗುಬ್ಬಿ ಮೇಲೆ ಬ್ರಹ್ಮಾಸ್ತ್ರ. ಇದು ರಾಜ್ ಬಿ.ಶೆಟ್ಟಿ ನಟಿಸಿರುವ ಸಿನಿಮಾ. ಆಗಸ್ಟ್ ಮೊದಲನೇ ವಾರ, ವರಮಹಾಲಕ್ಷ್ಮಿ ಹಬ್ಬಕ್ಕೆ ಬರುತ್ತಿರುವ ಈ ಚಿತ್ರದಲ್ಲಿ ಕಾಮಿಡಿಯ ಅಟ್ಟಹಾಸವೇ ಇದೆ. ಪ್ರೇಕ್ಷಕರನ್ನು ನಕ್ಕು ನಲಿಸಿಯೇ ಗೆಲ್ಲಲು ಹೊರಟಿದ್ದಾರೆ ನಿದೇಶಕ ಸುಜಾ ಶಾಸ್ತ್ರಿ ಮತ್ತು ನಿರ್ಮಾಪಕ ಟಿ.ಆರ್.ಚಂದ್ರಶೇಖರ್.
ಕನ್ನಡದಲ್ಲಿ ಇತ್ತೀಚೆಗೆ ಟಿ.ಆರ್.ಚಂದ್ರಶೇಖರ್ ಮೈದಾಸನೆಂದೇ ಖ್ಯಾತರಾಗುತ್ತಿದ್ದಾರೆ. ಅವರ ಚಿತ್ರಗಳು ಒಂದರ ಹಿಂದೊಂದು ಗೆಲ್ಲುತ್ತಿರುವುದೇ ಇದಕ್ಕೆ ಉದಾಹರಣೆ. ಈಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಿದ್ದಾರೆ.
ಸ್ವಾಗತ ಕೃಷ್ಣಾ ಎಂಬ ಹಾಡು ಈಗಾಗಲೇ ನೋಡುಗರ ಮುದಲ್ಲಿ ನಗೆಯ ಅಲೆ ಎಬ್ಬಿಸಿದೆ. ಕವಿತಾ ಗೌಡ ನಾಯಕಿಯಾಗಿರುವ ಚಿತ್ರದಲ್ಲಿ ಕಾಮಿಡಿಯ ಅಟ್ಟಹಾಸವೇ ಇದೆಯಂತೆ. ಸೆನ್ಸಾರ್ ಮಂಡಳಿ ಸದಸ್ಯರು ಚಿತ್ರವನ್ನು ನೋಡುತ್ತಲೇ ನಕ್ಕೂ ನಕ್ಕು ಸುಸ್ತಾದರಂತೆ. ಹೀಗೆ ಶಹಬ್ಬಾಸ್‍ಗಿರಿ ಪಡೆದೇ ಎಂಟ್ರಿ ಕೊಡುತ್ತಿರುವ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ಗುಬ್ಬಿ ಯಾರು.. ಬ್ರಹ್ಮಾಸ್ತ್ರ ಏನು ಅನ್ನೋದನ್ನು ತಿಳಿದುಕೊಳ್ಳೋಕೆ ವರಮಹಾಲಕ್ಷ್ಮಿ ಹಬ್ಬದವರೆಗೆ ಕಾಯಬೇಕು.