ಕಿಚ್ಚ ಸುದೀಪ್ ನಟಿಸುವ ಚಿತ್ರ ಎಂದರೆ ಅವರ ಪಾತ್ರದ ಮೇಲೆ ಭಾರಿ ನಿರೀಕ್ಷೆ ಇರುವುದು ಸಹಜವೇ. ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3ಯಲ್ಲಿ ಸಲ್ಲು ಜೊತೆ ನಮ್ಮ ಕಿಚ್ಚ ಇದ್ದಾರೆ ಎಂದಾಕ್ಷಣ ಕನ್ನಡಿಗರು ಥ್ರಿಲ್ಲಾಗಿದ್ದರು. ಈಗ ದಬಾಂಗ್ 3 ಚಿತ್ರದ ನಿರ್ಮಾಪಕ ಅರ್ಬಾಜ್ ಖಾನ್, ಕಿಚ್ಚನ ಫ್ಯಾನ್ಸುಗಳೆಲ್ಲ ಥ್ರಿಲ್ಲಾಗುವಂತ ಸುದ್ದಿ ಕೊಟ್ಟಿದ್ದಾರೆ.
ದಬಾಂಗ್ 3ಯಲ್ಲಿ ಸುದೀಪ್ ಅವರದ್ದು ಸರ್‍ಪ್ರೈಸ್ ಎಲಿಮೆಂಟ್ ಎಂದಿದ್ದಾರೆ. ನಿರ್ಮಾಪಕರೇ ಸುದೀಪ್ ಸರ್‍ಪ್ರೈಸ್ ಎಲಿಮೆಂಟ್ ಎನ್ನುತ್ತಿರುವಾಗ ಅಭಿಮಾನಿಗಳ ನಿರೀಕ್ಷೆ ಯಾವ ಮಟ್ಟಕ್ಕೇರಬಹುದು..? ಕಾದು ನೋಡಿ.. ಎಂಜಾಯ್ ಮಾಡಿ.