` ರಶ್ಮಿಕಾ ನಿಷೇಧಕ್ಕೆ ಕನ್ನಡ ಸಂಘಟನೆಗಳ ಮನವಿ - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
kannada groups demand film chamber to ban rashmika
complaint submitted to KFCC

ಕನ್ನಡದಲ್ಲಿ ಡಬ್ಬಿಂಗ್ ಮಾಡುವುದು ಭಾರೀ ಕಷ್ಟ ಎಂದಿದ್ದ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಚಿತ್ರರಂಗದಿಂದ ನಿಷೇಧಿಸಬೇಕು ಎಂಬ ಕೂಗು ಬಲವಾಗತೊಡಗಿದೆ. ಚೆನ್ನೈನಲ್ಲಿ ಡಿಯರ್ ಕಾಮ್ರೇಡ್ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿದ್ದ ರಶ್ಮಿಕಾ ಮಂದಣ್ಣ ತಮಗೆ ಕನ್ನಡದಲ್ಲಿ ಡಬ್ಬಿಂಗ್ ಮಾಡುವುದು ಕಷ್ಟ ಎಂದಿದ್ದರು. ಒಬ್ಬ ಕನ್ನಡತಿಯಾಗಿ ಹೀಗೆ ಹೇಳಿದ್ದು ಸರೀನಾ ಎಂದು ಸಿಟ್ಟಿಗೆದ್ದಿರುವ ಕೆಲವು ಕನ್ನಡ ಸಂಘಟನೆಗಳು ರಶ್ಮಿಕಾ ಮಂದಣ್ಣರನ್ನು ಕನ್ನಡ ಚಿತ್ರರಂಗದಿಂದಲೇ ನಿಷೇಧಿಸಬೇಕು ಎಂದು ಒತ್ತಾಯಿಸಿವೆ.

ಕರ್ನಾಟಕ ಸಂಘಟನೆಗಳ ಒಕ್ಕೂಟ ಈ ಕುರಿತು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದೆ. ಈ ಕುರಿತು ರಶ್ಮಿಕಾ ಮಂದಣ್ಣ ಅವರನ್ನು ಕರೆದು ಮಾತುಕತೆ ನಡೆಸೋದಾಗಿ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ತಿಳಿಸಿದ್ದಾರೆ.

Matthe Udbhava Trailer Launch Gallery

Maya Bazaar Pressmeet Gallery