` ಅಮ್ಮ ತಾರಾಗೆ ಡಬಲ್ ಖುಷಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
thara shines in sinngs an in adi lakshmi purana
Thara

ತಾರಾ ಅನುರಾಧಾಗೆ ಈ ವಾರ ಡಬಲ್ ಡಬಲ್ ಖುಷಿ. ಕಾರಣ ಇಷ್ಟೆ, ಅವರು ತಾಯಿಯಾಗಿ ನಟಿಸಿರುವ ಎರಡು ಚಿತ್ರಗಳು ಈ ವಾರ ರಿಲೀಸ್ ಆಗಿವೆ. ಎರಡೂ ಚಿತ್ರಗಳಲ್ಲಿ ಹೀರೋ, ಹೀರೋಯಿನ್ ಅವರಷ್ಟೇ ಹೈಲೈಟ್ ಆಗಿರುವುದು ತಾರಾ ಅವರ ಅಮ್ಮನ ಪಾತ್ರ.

ಆದಿ ಲಕ್ಷ್ಮಿ ಪುರಾಣ ಚಿತ್ರದಲ್ಲಿ ನಾಯಕ ನಿರೂಪ್ ಭಂಡಾರಿಗೆ ತಾರಾ ಅಮ್ಮನಾಗಿ ನಟಿಸಿದ್ದಾರೆ. ತಾರಾ ಅವರ ನಟನೆಗೆ ಬಂದಿರುವ ವಿಮರ್ಶೆಗಳು ತಾರಾ ಅವರ ಖುಷಿ ಹೆಚ್ಚಿಸಿರುವುದು ಖರೆ.

ಸಿಂಗ ಚಿತ್ರದಲ್ಲೂ ನಟ ಚಿರಂಜೀವಿ ಸರ್ಜಾಗೆ ತಾರಾ ಅಮ್ಮ. ಕ್ಲೈಮಾಕ್ಸ್ ಹೊತ್ತಿಗೆ ಇಡೀ ಚಿತ್ರವನ್ನು ತಾರಾ ಆವರಿಸಿಕೊಂಡು ಬಿಡುತ್ತಾರೆ.

ವಿಶೇಷವೆಂದರೆ ಎರಡೂ ಕಮರ್ಷಿಯಲ್ ಚಿತ್ರಗಳೇ. ಆದರೂ.. ತಾರಾ ಮಿರಮಿರನೆ ಮಿಂಚಿದ್ದಾರೆ.  

Kurukshetra Celebrity Show Gallery

Rightbanner02_gimmick_inside

Nanna Prakara Movie Images