` ಡಿಜಿಟಲ್ ಮಾರ್ಕೆಟ್ಟಿನಲ್ಲಿ ಗೀತಾಗೆ ಬಂಪರ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ganesh's geeth gets good price at digital market
Ganesh, Shanvi Srivatsav Image from Geetha

ಗೋಲ್ಡನ್ ಸ್ಟಾರ್ ಗಣೇಶ್, ಶಾನ್ವಿ ಶ್ರೀವಾಸ್ತವ್ ಅಭಿನಯಿಸುತ್ತಿರುವ ಗೀತಾ ಸಿನಿಮಾ, ರಿಲೀಸ್ ಆಗುವುದಕ್ಕೂ ಮೊದಲೇ ಭರ್ಜರಿಯಾಗಿ ಸೇಲ್ ಆಗುತ್ತಿದೆ. ವಿಜಯ್ ನಾಗೇಂದ್ರ ಚೊಚ್ಚಲ ನಿರ್ದೇಶನದ ಗೀತಾ, ಟೈಟಲ್ ಕಾರಣದಿಂದಾಗಿಯೇ ದೊಡ್ಡ ನಿರೀಕ್ಷೆ ಮೂಡಿಸಿದೆ. 

ಶಂಕರ್‍ನಾಗ್ ಅವರ ಕ್ಲಾಸಿಕ್ ಸಿನಿಮಾಗಳಲ್ಲಿ ಗೀತಾ ಕೂಡಾ ಒಂದು. ಅದೇ ಟೈಟಲ್ಲಿನಲ್ಲಿ ಮತ್ತೆ ಬರುತ್ತಿರುವ ಚಿತ್ರದಲ್ಲಿ ಗಣೇಶ್‍ಗೆ ಶಾನ್ವಿ ಒಬ್ಬರೇ ಅಲ್ಲ, ಇನ್ನೂ ಇಬ್ಬರು ನಾಯಕಿಯರಿದ್ದಾರೆ. ಪ್ರಯಾಗ ಮಾರ್ಟಿನ್, ಪಾರ್ವತಿ ಅರುಣ್ ಕೂಡಾ ನಾಯಕಿಯರು.

ಈ ಚಿತ್ರ ಈಗ ಅಮೇಜಾನ್‍ಗೆ 2.75 ಕೋಟಿಗೆ ಸೇಲ್ ಆಗಿದೆಯಂತೆ. ಶೂಟಿಂಗ್ ಮುಗಿದು, ಪ್ರಥಮ ಪ್ರತಿ ಬರುವುದಕ್ಕೂ ಮೊದಲು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರುವುದು ಚಿತ್ರದ ನಿರ್ಮಾಪಕರ ಖುಷಿ ಹೆಚ್ಚಿಸಿದೆ. 

Kurukshetra Celebrity Show Gallery

Rightbanner02_gimmick_inside

Nanna Prakara Movie Images