ಟಾಲಿವುಡ್ ಹಾಗೂ ಬಾಲಿವುಡ್ನ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ, ಇತ್ತೀಚೆಗೆ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಗೆ, ತಿಕ್ಕಲು ಹೇಳಿಕೆಗಳಿಗೆ, ವರ್ತನೆಗೆ ಫೇಮಸ್ಸು. ಈ ಬಾರಿಯೂ ಅಂತಹುದೇ ವಿವಾದದ ಮೂಲಕ ಸುದ್ದಿಯಾಗಿದ್ದಾರೆ ರಾಮ್ಗೋಪಾಲ್ ವರ್ಮಾ.
ಕನ್ನಡದ ಹುಡುಗಿ, ಅದೇ ವಜ್ರಕಾಯ ಚಿತ್ರದ ಪಟಾಕ ನಭಾ ನಟೇಶ್, ತೆಲುಗಿನಲ್ಲಿ ಇಸ್ಮಾರ್ಟ್ ಶಂಕರ್ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಇಬ್ಬರು ನಾಯಕಿರಯಲ್ಲಿ ಅವರೂ ಒಬ್ಬರು. ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾ ಸಕ್ಸಸ್ ಆಗಿದೆ. ಆ ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ವರ್ಮಾ ಕೂಡಾ ಇದ್ದರು.
ಖುಷಿಯ ನಷೆ ಮೀರಿದ ನಂತರ ವರ್ಮಾ, ಅಲ್ಲಿದ್ದವರಿಗೆ ಬಿಯರ್ ಸ್ನಾನ ಮಾಡಿಸಿದ್ದಾರೆ. ವರ್ಮಾ ಅವರಿಂದ ಬಿಯರ್ ಸ್ನಾನ ಮಾಡಿಸಿಕೊಂಡವರಲ್ಲಿ ನಭಾ ನಟೇಶ್ ಕೂಡಾ ಒಬ್ಬರು.
ಅದನ್ನು ಹೆಮ್ಮೆಯೆಂಬಂತೆ ತಮ್ಮದೇ ಟ್ವಿಟರ್ನಲ್ಲಿ ಹಾಕಿಕೊಂಡಿದ್ದಾರೆ ವರ್ಮಾ. ಟೀಕೆಗಳಿಗೆ.. ಎಂದಿನಂತೆ ಡೋಂಟ್ಕೇರ್.