ದತ್ತಾತ್ರೇಯ ಸ್ಯಾಂಡಲ್‍ವುಡ್‍ನಲ್ಲಿ ದತ್ತಣ್ಣ ಎಂದೇ ಫೇಮಸ್. ಅವರೀಗ ಬಾಲಿವುಡ್‍ಗೂ ಕಾಲಿಟ್ಟಿದ್ದಾರೆ. ಚಂದ್ರಯಾನ-2 ಉಡ್ಡಯನದ ಸಮಯದಲ್ಲೇ ಮಿಷನ್ ಮಂಗಲ್ ಸಿನಿಮಾ ರಿಲೀಸ್ ಆಗುತ್ತಿದೆ. ಇದು ಸೈನ್ಸ್ ಆಧರಿತ ಸಿನಿಮಾ. ಅಕ್ಷಯ್ ಕುಮಾರ್, ಸೋನಾಕ್ಷಿ ಸಿನ್ಹಾ ಪ್ರಧಾನ ಪಾತ್ರದಲ್ಲಿದ್ದಾರೆ. ಆದರೆ ಅವರೆಲ್ಲರನ್ನೂ ಅಚ್ಚರಿಗೊಳಿಸಿರುವುದು ದತ್ತಣ್ಣ ಅವರ ಸಾಧನೆ.
ದತ್ತಣ್ಣ ಈಗಾಗಲೇ 3 ರಾಷ್ಟ್ರಪ್ರಶಸ್ತಿ ತೆಗೆದುಕೊಂಡಿದ್ದಾರೆ ಎಂದು ತಿಳಿದೇ ಅಚ್ಚರಿಗೊಂಡಿರುವ ಅಕ್ಷಯ್ ಮತ್ತು ಸೋನಾಕ್ಷಿಗೆ.. ದತ್ತಣ್ಣ ಎಚ್‍ಎಎಲ್ ಹಾಗೂ ಏರ್‍ಫೋರ್ಸ್‍ನಲ್ಲಿ ಕೆಲಸ ಮಾಡಿದವರು ಎಂದು ತಿಳಿದು ಇನ್ನಷ್ಟು ಅಚ್ಚರಿಗೊಂಡಿದ್ದಾರೆ.
ಅಕ್ಷಯ್ ಕುಮಾರ್ ಚಿತ್ರದ ಸುದ್ದಿಗೋಷ್ಟಿಯಲ್ಲಿ ದತ್ತಣ್ಣನವರ ಸಾಧನೆಯನ್ನು ಹೆಮ್ಮೆಯಿಂದ ಹೇಳಿದ್ದಾರೆ. ಇಡೀ ಚಿತ್ರತಂಡ ಹಾಗೂ ಮಾಧ್ಯಮದವರು ಎದ್ದು ನಿಂತು ಚಪ್ಪಾಳೆ ತಟ್ಟಿ ದತ್ತಣ್ಣರನ್ನು ಅಭಿನಂದಿಸಿದ್ದಾರೆ. ದತ್ತಣ್ಣ ಕೀರ್ತಿ ಈಗ ಕರ್ನಾಟಕದ ಆಚೆಗೂ ಹಬ್ಬತೊಡಗಿದೆ.