` ಲಾ ಅಂದ್ರೆ ಲವ್ & ವಿನ್.. ಇದು ದಶರಥನ ವಾದ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ravichandran plays lawyer in sadharath
Dasharatha Movie Image

ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತೊಮ್ಮೆ ಲಾಯರ್ ಆಗಿದ್ದಾರೆ. ಬ್ರಹ್ಮ ವಿಷ್ಣು ಮಹೇಶ್ವರ, ಯುದ್ಧಕಾಂಡ ಚಿತ್ರಗಳಲ್ಲಿ ವಕೀಲರಾಗಿ ನಟಿಸಿದ್ದ ರವಿಚಂದ್ರನ್, ಮತ್ತೊಮ್ಮೆ ದಶರಥ ಚಿತ್ರದಲ್ಲಿ ಲಾಯರ್ ಆಗಿದ್ದಾರೆ. ಸಿನಿಮಾ ಜುಲೈ 26ಕ್ಕೆ ರಿಲೀಸ್ ಆಗುತ್ತಿದ್ದು, ಎಂ.ಎಸ್.ರಮೇಶ್ ನಿರ್ದೇಶನವಿದೆ.

ವಾದ ವಿವಾದದ ಆಚೆ ಲಾಯರ್ ಯಾಗಿಗಾಗಿ, ಯಾವ ವಿಷಯಕ್ಕಾಗಿ ಕೋರ್ಟ್‍ನಲ್ಲಿ ವಾದಕ್ಕಿಳಿಯುತ್ತಾರೆ ಎನ್ನುವುದೇ ಚಿತ್ರದ ವಿಶೇಷವಂತೆ. ಲಾ ಅಂದ್ರೆ ಲವ್ ಅಂಡ್ ವಿನ್ ಇಲ್ಲವೇ ಲೀಗಲ್ ಅನೌನ್ಸ್ ವಾರ್ ಎನ್ನುವ ಸಿದ್ಧಾಂತ. ಅದನ್ನು ಏತಕ್ಕಾಗಿ ಪಾಲಿಸುತ್ತಾರೆನ್ನುವುದೇ ಚಿತ್ರದ ಹೈಲೈಟ್ ಎನ್ನುತ್ತಾರೆ ನಿರ್ದೇಶಕ ಎಂಎಸ್ ರಮೇಶ್.

ರವಿಚಂದ್ರನ್‍ಗೆ ಸರಿಸಮಾನವಾದ ಪಾತ್ರದಲ್ಲಿ ನಟಿಸಿರುವುದು ರಂಗಾಯಣ ರಘು. ಇಬ್ಬರ ಮುಖಾಮುಖಿ ಪ್ರೇಕ್ಷಕರನ್ನು ತುದಿಗಾಲಲ್ಲಿ ಕೂರಿಸುತ್ತದೆ ಎನ್ನುವ ರಮೇಶ್, ಚಿತ್ರದ ಬಗ್ಗೆ ಕಾನ್ಫಿಡೆನ್ಸ್ ಇಟ್ಟುಕೊಂಡಿದ್ದಾರೆ. ಅಕ್ಷಯ ಸಮರ್ಥ ನಿರ್ಮಾಪಕರಾಗಿರುವ ಚಿತ್ರ ವಿಭಿನ್ನ ಕಥಾಹಂದರ ಇರುವ ಚಿತ್ರ.

Matthe Udbhava Trailer Launch Gallery

Maya Bazaar Pressmeet Gallery