ಶ್ಯಾನೆ ಟಾಪಾಗವ್ಳೆ.. & ವ್ಹಾಟ್ ಎ ಬ್ಯೂಟಿಫುಲ್ಲು ಹುಡುಗಿ ಶಿವ ಸಿವಾ.. ಹಾಡು ಕೇಳಿದವರು, ಟ್ರೇಲರ್‍ನಲ್ಲಿ ಫೈಟು ನೋಡಿದವರು.. ಇದೊಂದು ಪಕ್ಕಾ ಮಾಸ್ ಸಿನಿಮಾ ಇರಬೇಕು ಎಂದುಕೊಳ್ತಾರೆ. ಚಿರಂಜೀವಿ ಸರ್ಜಾ, ಅದಿತಿ ಪ್ರಭುದೇವ ಅವರ ಹಾಡು, ಕುಣಿತ, ಫೈಟು ಹಾಗೆಯೇ ಇವೆ. ಆದರೆ, ಇದು ಎಲ್ಲ ಕಮರ್ಷಿಯಲ್ ಅಂಶಗಳೂ ಇರೋ ತಾಯಿ-ಮಗನ ಸೆಂಟಿಮೆಂಟ್ ಕಥೆ ಎನ್ನುವ ಮೂಲಕ ಕುತೂಹಲ ಹುಟ್ಟಿಸುತ್ತಾರೆ ನಿರ್ಮಾಪಕ ಉದಯ್ ಮೆಹ್ತಾ.
ಚಿತ್ರದಲ್ಲಿ ಚಿರು ತಾಯಿಯಾಗಿ ನಟಿಸಿರೋದು ನಟಿ ತಾರಾ ಅನುರಾಧ. ನಾಯಕಿಯನ್ನು, ನಾಯಕನಿಗಿಂತಲೂ ಮೊದಲು ಇಷ್ಟಪಡುವುದು ಅವರೇ. ಹೀರೋಗೆ ಸಿಂಗ ಎಂದು ಹೆಸರಿಡೋಕೂ ಕಾರಣವಿದೆ. ಅದು ಚಿತ್ರದಲ್ಲಿ ಗೊತ್ತಾಗಲಿದೆ ಎನ್ನುವ ಉದಯ್ ಮೆಹ್ತಾ, ಚಿತ್ರವನ್ನು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುತ್ತಿದ್ದಾರೆ.
ವಿಜಯ್ ಕಿರಣ್ ನಿರ್ದೇಶನದ ಚಿತ್ರದಲ್ಲಿ ಮಾಸ್ ಮತ್ತು ಕ್ಲಾಸ್ ಎರಡೂ ವರ್ಗಕ್ಕೆ ರೀಚ್ ಆಗುವ ಅಂಶಗಳಿವೆ.