` ಪೈಲ್ವಾನ್ ಆಫ್ ರೊಮ್ಯಾನ್ಸ್ : ಕಿಚ್ಚನಿಗೆ ಸ್ಟಾರ್ ನಿರ್ದೇಶಕ ಕೊಟ್ಟ ಹೊಸ ಬಿರುದು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
santhosh anandram gives new title to sudeep
Santhosh Anandram, Sudeep

ಪೈಲ್ವಾನ್ ಚಿತ್ರದ ಇನ್ನೊಂದು ಹಾಡು ಬಿಡುಗಡೆಯಾಗಿದೆ. ಒಂಚೂರು ತರಲೆ.. ಒಂಚೂರು ರೊಮ್ಯಾನ್ಸ್ ಇರುವ ಹಾಡಿದು. ಕಣ್ಮಣಿಯೇ.. ಕಣ್ಣು ಹೊಡೆಯೇ.. ಎಂಬ ಗೀತೆಯಲ್ಲಿ ಕಿಚ್ಚನ ಹೃದಯಕ್ಕೆ ಕಚಗುಳಿ ಇಟ್ಟಿದ್ದಾರೆ ಆಕಾಂಕ್ಷಾ. ಹಾಡಿನ ಲಿರಿಕಲ್ ವಿಡಿಯೋ ಸೆನ್ಸೇಷನ್ ಸೃಷ್ಟಿಸಿದೆ. ಕಾರಣ ಇಷ್ಟೆ.. ಶೃಂಗಾರ ಗೀತೆಯಲ್ಲಿ ಸುದೀಪ್, ಆಕಾಂಕ್ಷಾ ಮಿಂಚಿ ಮಿನುಗಿದ್ದಾರೆ. ಭಾರತ ಚಿತ್ರರಂಗದ ಸ್ಟಾರ್ ನಟರೆಲ್ಲ ಹಾಡಿಗೆ ತಲೆದೂಗಿದ್ದಾರೆ. ಮೆಚ್ಚಿದ್ದಾರೆ.

ಇದೆಲ್ಲದರ ನಡುವೆ ಕಿಚ್ಚ ಸುದೀಪ್‍ಗೆ ಹೊಸ ಬಿರುದು ಕೊಟ್ಟಿದ್ದಾರೆ ಸ್ಟಾರ್ ನಿರ್ದೇಶಕ ಸಂತೋಷ್ ಆನಂದರಾಮ್. ಮಿ. & ಮಿಸೆಸ್ ರಾಮಾಚಾರಿ ಮತ್ತು ರಾಜಕುಮಾರ ಚಿತ್ರಗಳ ನಿರ್ದೇಶಕ ಸಂತೋಷ್, ಕಿಚ್ಚ ಸುದೀಪ್‍ಗೆ ಪೈಲ್ವಾನ್ ಆಫ್ ರೊಮ್ಯಾನ್ಸ್ ಎಂಬ ಬಿರುದು ಕೊಟ್ಟಿದ್ದಾರೆ.

ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿ ನೀಡಿದ್ದರೆ, ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery