ಆದಿ ಲಕ್ಷ್ಮೀ ಪುರಾಣ ಬಿಡುಗಡೆಗೆ ರೆಡಿಯಾಗಿದೆ. ಮುಂದಿನ ವಾರ ತೆರೆಗೆ ಬರುತ್ತಿರುವ ಈ ಚಿತ್ರದ ನಿರ್ದೇಶಕಿ ಪ್ರಿಯಾ ಹಾಗೂ ಕ್ಯಾಮೆರಾಮನ್ ಪ್ರೀತಾ ಜಯರಾಮನ್ ಇಬ್ಬರೂ ಮಹಿಳೆಯರೇ. ರಾಧಿಕಾ ಪಂಡಿತ್ ಹೆಚ್ಚೂ ಕಡಿಮೆ 3 ವರ್ಷಗಳ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಚಿತ್ರವಿದು. ರಾಧಿಕಾ ಪಂಡಿತ್ ಮದುವೆಯಾದ ಮೇಲೆ ನಟಿಸಿರುವ ಮೊದಲ ಚಿತ್ರವೂ ಇದೇ.. ಹೀಗೆ ವಿಶೇಷಗಳ ಮೇಲೆ ವಿಶೇಷವಿರುವ ಚಿತ್ರದ ಮತ್ತೂ ಒಂದು ವಿಶೇಷವೆಂದರೆ ಚಿತ್ರದ ಕಥೆ.
ಮಣಿರತ್ನಂ ಬಳಿ ಸಹಾಯಕಿಯಾಗಿದ್ದ ಪ್ರಿಯಾ, ತಮ್ಮ ಕಥೆಯನ್ನು ಸುಹಾಸಿನಿ ಅವರ ಬಳಿಯೂ ಹೇಳಿದ್ದರು. ಕಥೆ ಸುಹಾಸಿನಿಗೆ ಇಷ್ಟವಾಗಿತ್ತು. ಆ ಕಥೆಯನ್ನು ಅವರು ಯಶ್‍ಗೆ ಹೇಳಿದರು. ಹೀಗೆ ಸುಹಾಸಿನಿ ಇಷ್ಟ ಪಟ್ಟು ಶುರುವಾದ ಕಥೆ ಈಗ ಸಿನಿಮಾ ಆಗಿದೆ.
ನಿರೂಪ್ ಭಂಡಾರಿ, ರಾಧಿಕಾ ಪಂಡಿತ್ ಪಾತ್ರಗಳು, ಆ ಪಾತ್ರಗಳು ಪರಸ್ಪರ ಹೇಳಿಕೊಳ್ಳುವ ಸುಳ್ಳುಗಳು, ಅವು ಸೃಷ್ಟಿಸುವ ಅವಾಂತರಗಳು.. ಅಬ್ಬಾ.. ತೆರೆಯ ಮೇಲೆ ಅದರಿಂದ ಸೃಷ್ಟಿಯಾಗುವ ಗೊಂದಲಗಳು ಮಜಾ ಕೊಡುತ್ತವೆ ಎನ್ನುತ್ತಾರೆ ರಾಕ್‍ಲೈನ್ ವೆಂಕಟೇಶ್.