ಕಿಚ್ಚ ಸುದೀಪ್ ಕುಸ್ತಿ ಪಟುವಾಗಿ ನಟಿಸಿರುವ ಪೈಲ್ವಾನ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 29ಕ್ಕೆ ಚಿತ್ರಮಂದಿರಗಳಲ್ಲಿ ತೊಡೆತಟ್ಟಲಿದ್ದಾನೆ ಪೈಲ್ವಾನ್. ಕೃಷ್ಣ ನಿರ್ದೇಶನದ ಪೈಲ್ವಾನ್ ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿದೆ.
ಸುದೀಪ್ ಎದುರು ಆಕಾಂಕ್ಷಾ ಸಿಂಗ್ ನಾಯಕಿಯಾಗಿದ್ದು, ಸುನಿಲ್ ಶೆಟ್ಟಿ, ಕಬೀರ್ ಸಿಂಗ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಚಿತ್ರವಿದು.
ಖ್ಯಾತ ವಿತರಕ ಕಾರ್ತಿಕ್ ಗೌಡ, ಕರ್ನಾಟಕದಲ್ಲಿ ಚಿತ್ರದ ವಿತರಣೆ ಮಾಡುತ್ತಿದ್ದಾರೆ. ಲಹರಿ ಸಂಸ್ಥೆ ಆಡಿಯೋ ಬಿಡುಗಡೆಗೆ ಸಿದ್ಧವಾಗುತ್ತಿದೆ.