ಇಂಡಿಯಾ ವಿಶ್ವಕಪ್‍ನಿಂದ ಹೊರಬಿದ್ದು, ಇಂಗ್ಲೆಂಡ್ ಇದೇ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿದೆ. ಇಂಥಾ ಹೊತ್ತಲ್ಲಿ ಈ ಟೈಟಲ್ ಹೊರಬಿದ್ದಿದೆ. ಇಂಡಿಯಾ V/s ಇಂಗ್ಲೆಂಡ್ ಇದು ಕ್ರಿಕೆಟ್ ಅಲ್ಲ. ಇದು, ನಾಗತಿಹಳ್ಳಿ ಚಂದ್ರಶೇಖರ್ ಅವರ ಹೊಸ ಚಿತ್ರದ ಟೈಟಲ್. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿಸಿರುವ ನಾಗತಿಹಳ್ಳಿ, ಅಮೆರಿಕಾ, ಪ್ಯಾರಿಸ್ ನಂತರ ಮತ್ತೊಂದು ದೇಶದ ಹೆಸರನ್ನು ತಮ್ಮ ಚಿತ್ರಕ್ಕಿಟ್ಟಿದ್ದಾರೆ.
ವಸಿಷ್ಠ ಸಿಂಹ ಹಾಗೂ ಮಾನ್ವಿತಾ ಹರೀಶ್ ನಟಿಸಿರುವ ಚಿತ್ರದಲ್ಲಿ ಅನಂತ್‍ನಾಗ್, ಸುಮಲತಾ, ಸಾಧುಕೋಕಿಲ, ಪ್ರಕಾಶ್ ಬೆಳವಾಡಿ ಮೊದಲಾದವರು ನಟಿಸಿದ್ದಾರೆ. ಈ ಚಿತ್ರ ಕನ್ನಡದಲ್ಲಷ್ಟೇ ಅಲ್ಲ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗೂ ಡಬ್ ಆಗಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ.