` ಶಿವಣ್ಣ 57ನೇ ಹುಟ್ಟುಹಬ್ಬಕ್ಕೆ ಕಾಣಿಕೆಗಳ ಸುರಿಮಳೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivanna;s 57th birthday highloghts
Shvararajkumar Birthday Highlights

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ 57ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪತ್ನಿ ಗೀತಾ ಹಾಗೂ ತಮ್ಮ ಪುನೀತ್ ಜೊತೆ ಲಂಡನ್‍ನಲ್ಲಿರುವ ಶಿವಣ್ಣ, ಅಲ್ಲಿಯೇ ಕೇಕ್ ಕತ್ತರಿಸಿ ಸಂಭ್ರಮಿಸಿದ್ರು. ನಂತರ ಲಂಡನ್‍ನಲ್ಲಿರುವ ಗೆಳೆಯರು ಶಿವಣ್ಣಗೊಂದು ಪುಟ್ಟ ಪಾರ್ಟಿ ಕೊಟ್ಟರು. ಆದರೆ, ಅಭಿಮಾನಿಗಳ ಸಂಭ್ರಮವೇ ಬೇರೆ. 

ಮೊದಲು ಶಿವಣ್ಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿ ಎಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮಗಳನ್ನು ಮಾಡಿಸಿದ್ದ ಅಭಿಮಾನಿಗಳು, ಹುಟ್ಟುಹಬ್ಬದ ದಿನ ಕರುನಾಡ ಮನೆ ಮಗನು, ಕರುಣೆಯಲಿ ರಾಜರ ಮಗನು.. ಎಂಬ ಒಂದು ವಿಶೇಷ ಗೀತೆಯನ್ನೇ ರೆಡಿ ಮಾಡಿದ್ದಾರೆ. ಆ ಹಾಡನ್ನು ಪುನೀತ್ ರಾಜ್‍ಕುಮಾರ್ ಅವರ ಅಧಿಕೃತ ಪಿಆರ್‍ಕೆ ಯೂಟ್ಯೂಬ್ ಚಾನೆಲ್‍ನಲ್ಲಿ ರಿಲೀಸ್ ಮಾಡಿ ಖುಷಿ ಪಟ್ಟಿದ್ದಾರೆ. ಪ್ರಮೋದ್ ಜೋಯಿಸ್ ಸಾಹಿತ್ಯಕ್ಕೆ ಚೇತನ್ ಕೃಷ್ಣ ಧ್ವನಿ ನೀಡಿದ್ದಾರೆ.

ಇನ್ನು ಇದೇ ವೇಳೆ ಚಿತ್ರರಂಗದ ಗಣ್ಯರು ಶುಭಾಶಯ ಕೋರಿದ್ದಾರೆ. ಪಿ.ವಾಸು ನಿರ್ದೇಶನದ ದ್ವಾರಕೀಶ್ ಬ್ಯಾನರ್‍ನ ಆಯುಷ್ಮಾನ್ ಭವ ಚಿತ್ರದ ಪೋಸ್ಟರ್ ಹೊರಬಂದಿದೆ.

ಹರ್ಷ ನಿರ್ದೇಶನದ, ಜಯಣ್ಣ ಕಂಬೈನ್ಸ್‍ನ ಭಜರಂಗಿ2 ಚಿತ್ರದ ಫಸ್ಟ್‍ಲುಕ್ ಇದೇ ವೇಳೆ ಹೊರಬಿದ್ದಿದೆ. ದ್ರೋಣ ರಿಲೀಸ್‍ಗೆ ರೆಡಿ ಎಂದು ಸಾರಿದೆ. ಶಿವಣ್ಣ ಹ್ಯಾಪಿ.. ಹ್ಯಾಪಿ.

Matthe Udbhava Trailer Launch Gallery

Maya Bazaar Pressmeet Gallery