` ಯಾನ ನಿರ್ದೇಶಕರಿಗೆ ಶಹಬ್ಬಾಸ್ ಎಂದ ನಿರ್ಮಾಪಕ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yaana producer is about the movie
Harshi Shergir

ಯಾನ. ಜೈಜಗದೀಶ್, ವಿಜಯಲಕ್ಷ್ಮೀ ಸಿಂಗ್ ಮಕ್ಕಳ ಮೊದಲ ಸಿನಿಮಾ. ಅವರ ಮೂರೂ ಮಕ್ಕಳೂ ಒಟ್ಟಿಗೇ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಚಿತ್ರಕ್ಕೆ ಅಮ್ಮನೇ ನಿರ್ದೇಶಕಿ. ವೈಭವಿ, ವೈಸಿರಿ, ವೈನಿಧಿ ಮೂವರೂ ಈ ಚಿತ್ರದಲ್ಲಿ ನಾಯಕಿಯರು.

ಈಗಿನ ಯುವಜನತೆ ಮೊಬೈಲ್ ಫೋನ್‍ಗೆ ಅಡಿಕ್ಟ್ ಆಗಿದ್ದಾರೆ. ಅದರಿಂದಲೇ ಸಮಸ್ಯೆ ಮೈಮೇಲೆ ಎಳೆದುಕೊಳ್ಳುತ್ತಾರೆ. ಅದರಿಂದ ಅವರು ಹೊರ ಬರಲು ಪರದಾಡುತ್ತಾರೆ. ಅವರು ಆ ಸಮಸ್ಯೆಯಿಂದ ಹೇಗೆ ಹೊರಬರುತ್ತಾರೆ, ಒಂದು ಕುಟುಂಬ ಏಕೆ ಮುಖ್ಯ ಎನ್ನುವುದನ್ನು ಚಿತ್ರದಲ್ಲಿ ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ತುಂಬಾ ಚೆನ್ನಾಗಿ ತೋರಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ ನಿರ್ಮಾಪಕ ಹರೀಶ್ ಶೇರಿಗಾರ್.

ವಿಜಯಲಕ್ಷ್ಮಿ ಸಿಂಗ್ ತಮ್ಮ ಅನುಭವವನ್ನೆಲ್ಲ ಚಿತ್ರಕ್ಕೆ ಧಾರೆ ಎರೆದಿದ್ದಾರೆ. ಚಿತ್ರದ ಛಾಯಾಗ್ರಹಣವಂತೂ ಕಣ್ಣಿಗೆ ಹಬ್ಬ ಎಂದಿದ್ದಾರೆ ಶೇರಿಗಾರ್.

ಚಿತ್ರದಲ್ಲಿ ಒಟ್ಟು 7 ಹಾಡುಗಳಿವೆ. ಅಭಿಷೇಕ್, ಸುಮುಖ, ಚಕ್ರವರ್ತಿ ಹೀರೋಗಳು. ಅನಂತ್‍ನಾಗ್, ಸುಹಾಸಿನಿ, ಸುಂದರ್ ರಾಜ್ ನಟಿಸಿರುವ ಈ ಚಿತ್ರವನ್ನು ಹೆತ್ತವರು ನೋಡಬೇಕು ಎನ್ನುತ್ತಾರೆ ಶೇರಿಗಾರ್. ದುಬೈನಲ್ಲಿ ನೆಲೆಸಿರುವ ಹರೀಶ್ ಶೇರಿಗಾರ್ ಹಾಗೂ ಅವರ ಪತ್ನಿ ಶರ್ಮಿಳಾ ಶೇರಿಗಾರ್ ಅವರಿಗೆ ನಿರ್ಮಾಪಕರಾಗಿ ಇದು ಮೊದಲ ಸಿನಿಮಾ.

#

Gubbi Mele Bramhastra Movie Gallery

Rightbanner02_gimmick_inside

Nanna Prakara Audio Release Images