` ಶಿವಣ್ಣ ಸರ್ಜರಿ ಸಕ್ಸಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivarajkumar's operation successfull
Shivarajkumar

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಭುಜದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ನೋ ಪ್ರಾಬ್ಲಂ. ಯಾವುದೇ ತೊಂದರೆ, ಆತಂಕಗಳಿಲ್ಲದೆ ಯಶಸ್ವಿ ಆಪರೇಷನ್ ಮಾಡಿದ್ದಾರೆ ಲಂಡನ್ ವೈದ್ಯರು. ಇದೇನೂ ದೊಡ್ಡ ಆಪರೇಷನ್ ಅಲ್ಲ, ಆಪರೇಷನ್ ನಂತರ ಒಂದು ತಿಂಗಳು ರೆಸ್ಟ್ ಮತ್ತು ಒಟ್ಟು 2 ತಿಂಗಳು ರಿಸ್ಕ್ ತೆಗೆದುಕೊಂಡು ಸ್ಟಂಟ್ ಮಾಡುವ ಹಾಗಿಲ್ಲ ಅಷ್ಟೆ.

ಶಿವಣ್ಣ ಕುಟುಂಬದ ಜೊತೆ ಪುನೀತ್ ರಾಜ್‍ಕುಮಾರ್ ಲಂಡನ್‍ನಲ್ಲಿದ್ದು ಅಣ್ಣನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಶಿವಣ್ಣ ಬೇಗನೆ ಗುಣಮುಖರಾಗಲಿ ಎಂದು ಪೂಜೆ, ಹೋಮ, ಹವನ ನಡೆಸಿದ್ದಾರೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಅಭಿಮಾನಿಗಳೇ ರಿಲ್ಯಾಕ್ಸ್.

Ayushmanbhava Movie Gallery

Ellidhe Illitanaka Movie Gallery