` ಗುರುದೇಶಪಾಂಡೆ-ಯೋಗಿ ಕಾಂಬಿನೇಷನ್ ಹೊಸ ಸಿನಿಮಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
guru deshpande's new movie with yogi
Guru Deshpande, Yogi

ರಾಜಾಹುಲಿ ಖ್ಯಾತಿಯ ಗುರು ದೇಶಪಾಂಡೆ ಒಂದರ ಹಿಂದೊಂದು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅವರದ್ದೇ ನಿರ್ಮಾಣದ ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್‍ಮನ್ ಅಂತಿಮ ಹಂತದಲ್ಲಿದೆ. ಅದರ ಜೊತೆಯಲ್ಲೇ ಅಜೇಯ್ ರಾವ್ ನಾಯಕರಾಗಿರುವ ಇನ್ನೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ. ಆ ಕೆಲಸದ ಜೊತೆ ಜೊತೆಯಲ್ಲೇ ಲೂಸ್ ಮಾದ ಯೋಗಿಯ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ ಗುರುದೇಶಪಾಂಡೆ.

ಅಫ್‍ಕೋರ್ಸ್, ನಿರ್ದೇಶಕರಾಗಿ ಅಲ್ಲ.. ನಿರ್ಮಾಪಕರಾಗಿ. ನಿರ್ಮಾಪಕರಾಗಿ ಯೋಗಿ ಅಭಿನಯದ ಹೊಸ ಚಿತ್ರ 3ನೇಯದು. ಈ ಚಿತ್ರ ಗಿಲ್ಟ್ ಸುತ್ತಲೂ ಇದೆಯಂತೆ. ಸೋಷಿಯಲ್ ಮೀಡಿಯಾ ಹಾಗೂ ಅವರು ಕಣ್ಣಾರೆ ಕಂಡ ಸತ್ಯಕತೆ ಈ ಚಿತ್ರಕ್ಕೆ ಪ್ರೇರಣೆ. ಸದ್ಯಕ್ಕೆ ನಾನು ಮತ್ತು ಜಾರ್ಜ್ ಜೊತೆಯಾಗಿ ಚಿತ್ರಕಥೆ ಮಾಡುತ್ತಿದ್ದೇವೆ. ಸೆಪ್ಟೆಂಬರ್ ಹೊತ್ತಿಗೆ ಸಿನಿಮಾ ಶುರುವಾಗಲಿದೆ ಎಂದಿದ್ದಾರೆ ಗುರು ದೇಶಪಾಂಡೆ. ಆ ಚಿತ್ರಕ್ಕೆ ಹೊಸ ನಿರ್ದೇಶಕರ ಹುಡುಕಾಟದಲ್ಲಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery