ಬಹುಶಃ ಇತ್ತೀಚೆಗೆ ಹಾಡೊಂದು ಇಷ್ಟೊಂದು ದೊಡ್ಡ ಕ್ರೇಜ್ ಹುಟ್ಟುಹಾಕಿದ್ದ ಉದಾಹರಣೆ ಇಲ್ಲ. ಸಿಂಗ ಚಿತ್ರದ ಹಾಡು ಅಷ್ಟೊಂದು ಕ್ರೇಜ್ ಸೃಷ್ಟಿಸಿದೆ. ಶ್ಯಾನೆ ಟಾಪಾಗವ್ಳೆ ಅನ್ನೋ ಹಾಡಿದೆಯಲ್ಲ, ಅದು ಆನ್‍ಲೈನ್‍ನಲ್ಲಿ ಭಯಂಕರ ಫೇಮಸ್. ಅದೊಂದು ಹಾಡನ್ನು ನೋಡಿ ಮೆಚ್ಚಿದವರ ಸಂಖ್ಯೆ 80 ಲಕ್ಷಕ್ಕೂ ಹೆಚ್ಚು. ಆದರೆ ಅದಕ್ಕಿಂತಲೂ ದೊಡ್ಡದೊಂದು ನ್ಯೂಸ್ ಇನ್ನೊಂದಿದೆ.
ಚಿತ್ರದಲ್ಲಿ ಚಿರಂಜೀವಿ ಸರ್ಜಾ ಈ ಹಾಡು ಹಾಡೋದು ಅದಿತಿ ಪ್ರಭುದೇವ ಮೇಲೆ. ಆದರೆ, ಟಿಕ್‍ಟಾಕ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಈ ಹಾಡಿಗೆ ತಮ್ಮದೇ ಲಿರಿಕ್ಸ್ ಸೃಷ್ಟಿಸಿದೆ ಯುವ ಫಂಡ. ಅದರಲ್ಲೂ ಹುಡುಗಿಯರು ಈ ಹಾಡಿಗೆ ಪುರುಷಾಕಾರ ನೀಡಿ, ಶ್ಯಾನೆ ಟಾಪಾಗವ್ನೆ ನಮ್ ಹುಡುಗ ಶ್ಯಾನೆ ಟಾಪಾಗವ್ನೆ ಎಂದು ಹಾಡು ಹರಿಬಿಟ್ಟಿದ್ದಾರೆ.
ಟಿಕ್‍ಟಾಕ್ ಒಂದರಲ್ಲೇ ಈ ಹಾಡು 7 ಲಕ್ಷಕ್ಕೂ ಹೆಚ್ಚು ಮರುಸೃಷ್ಟಿಯಾಗಿದೆ. ಧರ್ಮವಿಶ್ ಖುಷಿಯಾಗಲೇಬೇಕಲ್ವೆ.. ಉದಯ್ ಮೆಹ್ತಾ ನಿರ್ಮಾಣದ ಸಿನಿಮಾಗೆ ವಿಜಯ್ ಕಿರಣ್ ನಿರ್ದೇಶನವಿದೆ.
ಚಿರು, ಅದಿತಿ ಜೊತೆ ರವಿಶಂಕರ್, ತಾರಾ, ಶಿವರಾಜ್ ಕೆಆರ್ ಪೇಟೆ, ಅರುಣಾ ಬಾಲರಾಜ್, ರಂಜಿತಾ ಮೊದಲಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.