ಎಲ್ಲಾದರೂ ಕಂಡಿದ್ದೀರಾ..? ಕೇಳಿದ್ದೀರಾ..? ಆದರೆ ಇದು ಸತ್ಯ.. ಸತ್ಯ.. ಸತ್ಯ.. ಪತಿ ಚಿರಂಜೀವಿ ಸರ್ಜಾ ಕಣ್ಣು ಹಾಕಿರೋ ಹುಡುಗಿ ಶ್ಯಾನೆ ಟಾಪ್ ಆಗಿರೋ ಆದಿತಿ ಪ್ರಭುದೇವ. ಆ ಹುಡುಗಿಯನ್ನು ನವೀನ್ ಸಜ್ಜು ಧ್ವನಿಯಲ್ಲಿ ಚಿರು ಹಾಡಿ ಹೊಗಳಿ ಕುಣಿದು ಕುಪ್ಪಳಿಸುತ್ತಿದ್ದರೆ, ಮೇಘನಾ ರಾಜ್ ಅವರ ಜೊತೆಯಲ್ಲೇ ಹಾಡಿ, ಹಾಡಿನ ಕಿಕ್ಕೇರಿಸಿದ್ದಾರೆ.
ವ್ಹಾಟ್ ಎ ಬ್ಯೂಟಿಫುಲ್ ಹುಡುಗಿ.. ಅನ್ನೋ ಈ ಹಾಡು ಸಿಂಗ ಚಿತ್ರದ್ದು. ಹಾಡನ್ನು ಬಿಡುಗಡೆ ಮಾಡಿರೋದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆ ಚಿತ್ರದ ಶ್ಯಾನೆ ಟಾಪಾಗವ್ಳೆ ಹಾಡು ಕೇಳಿ, ಅವರೇ ಚಿರುಗೆ ಕೇಳಿದ್ರಂತೆ. ಯಾವ ಚಿತ್ರದ್ದು ಈ ಹಾಡು, ವಿಚಾರಿಸು ಅಂತಾ. ಚಿರು ಚಿತ್ರದ್ದೇ ಎಂದು ಗೊತ್ತಾದಾಗ ಖುಷಿಯಾಗಿ ಅಭಿನಂದಿಸಿದ್ದರಂತೆ.
ಉದಯ್ ಮೆಹ್ತಾ ನಿರ್ಮಾಣದ ಚಿತ್ರಕ್ಕೆ ವಿಜಯ್ ಕಿರಣ್ ನಿರ್ದೇಶನ ಮಾಡಿದ್ದಾರೆ. ಧರ್ಮ ವಿಶ್ ಸಂಗೀತ ನೀಡಿದ್ದಾರೆ.