ಯಾನ ಚಿತ್ರದಲ್ಲಿ ಮೂವರು ಸಹೋದರಿಯರು ಒಟ್ಟಿಗೇ ನಟಿಸಿರುವುದು ಗೊತ್ತಿದೆಯಷ್ಟೇ. ಇಡೀ ಸಿನಿಮಾವೇ ಯೂತ್‍ಫುಲ್ ಜರ್ನಿ. ಯಾನ.. ಹುಡುಗ, ಹುಡುಗಿಯರು ಏನನ್ನೋ ಕಲೀತಾರೆ.. ಜೀವನದಲ್ಲಿ ಅಳವಡಿಸಿಕೊಳ್ತಾರೆ.. ಒಟ್ಟಿನಲ್ಲಿ ಇಡೀ ಸಿನಿಮಾವೇ ಒಂದು ಜರ್ನಿ ಎನ್ನುತ್ತಾರೆ ವೈನಿಧಿ.
ವೈನಿಧಿಯವರದ್ದು ಚಿತ್ರದಲ್ಲಿ ನಂದಿನಿ ಅನ್ನೋ ಫೈರ್ ಬ್ರಾಂಡ್ ಪಾತ್ರ. ಅವಳೇ ರೂಲರ್.. ಅವಳು ಹೇಳಿದ್ದೇ ಫೈನಲ್. ನಂದಿನಿಯ ಬಾಯ್‍ಫ್ರೆಂಡ್ ಯುವರಾಜ್ ಆಗಿ ನಟಿಸಿರೋದು ಅಭಿಷೇಕ್.
ನಾವು ಅಕ್ಕತಂಗಿಯರು ಮೂವರು ಹೀರೋಯಿನ್‍ಗಳಿರೋ ಸಿನಿಮಾ ನೋಡುವಾಗ ಅಲ್ಲಿನ ಪಾತ್ರಗಳನ್ನು ನಾವು ನಾವೇ ಕಲ್ಪಿಸಿಕೊಂಡು ಡಿಸ್ಕಸ್ ಮಾಡಿಕೊಂಡು ಎಂಜಾಯ್ ಮಾಡುತ್ತಿದ್ದೆವು. ಅಂತಹ ಆಪರ್ಚುನಿಟಿ ನಮಗೆ ನಮ್ಮ ಅಮ್ಮನಿಂದಲೇ ಬರುತ್ತೆ ಅನ್ನೋ ಕಲ್ಪನೆಯೂ ನಮಗಿರಲಿಲ್ಲ ಎನ್ನುತ್ತಾರೆ ವೈನಿಧಿ.
ಜೈಜಗದೀಶ್-ವಿಜಯಲಕ್ಷ್ಮೀ ಸಿಂಗ್ ದಂಪತಿಯ ಮೂರೂ ಮಕ್ಕಳು ಒಟ್ಟಿಗೇ ನಟಿಸಿರುವ ಯಾನಕ್ಕೆ, ತಾಯಿ ವಿಜಯಲಕ್ಷ್ಮಿಯೇ ನಿರ್ದೇಶಕಿ.