ನಧೀಂಧೀಂತನ.. ನಧೀಂಧೀಂತನ... ಆಲಾಪ ಕೇಳಿದರೆ ತಕ್ಷಣ ನೆನಪಾಗುವುದು ರಾಜೇಶ್ ಕೃಷ್ಣ ಮತ್ತು ಭಾವನಾ ರಾವ್. ಭಟ್ಟರ ಗಾಳಿಪಟ್ಟದಲ್ಲಿ ತರಲೆ ಪಾವನಿಯಾಗಿ, ಹುಡುಗಾಟ ಹುಡುಗಿಯಾಗಿ, ಸ್ವಲ್ಪವೇ ಸ್ವಲ್ಪ ಬಜಾರಿಯಾಗಿ ಗಮನ ಸೆಳೆದಿದ್ದ ಭಾವನಾ ರಾವ್, ಅದ್ಭುತ ನೃತ್ಯಗಾತಿ. ತಮ್ಮದೇ ಆದ ಹೆಜ್ಜೆ ಎಂಬ ನೃತ್ಯಶಾಲೆಯನ್ನೂ ಹೊಂದಿರುವ ಭಾವನಾ ರಾವ್, ಹಲವು ರಿಯಾಲಿಟಿ ಶೋಗಳಲ್ಲೂ ಮಿಂಚಿದ್ದಾರೆ. ಅವರೀಗ ಯಾನದ ಮೂಲಕ ಕೊರಿಯಾಗ್ರಫರ್ ಆಗಿದ್ದಾರೆ.
ಯಾನ ಚಿತ್ರದ ಒಂದು ಹಾಡಿಗೆ ಭಾವನಾ ರಾವ್ ಕೊರಿಯೋಗ್ರಾಫರ್. ಜೋಶ್ವಾ ಶ್ರೀಧರ್ ಸಂಗೀತ ನೀಡಿರುವ ಹಾಡನ್ನು ಮಡಿಕೇರಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ನಿರ್ದೇಶಕರು ಹೇಳಿದಂತೆ ನೃತ್ಯ ಮಾಡೋದು ಸುಲಭ, ಆದರೆ, ನೃತ್ಯವನ್ನು ಸಂಯೋಜಿಸುವುದೇ ದೊಡ್ಡ ಕಷ್ಟ ಎನ್ನುವ ಭಾವನಾ ರಾವ್, ತಮ್ಮ ಕನಸನ್ನಂತೂ ಈಡೇರಿಸಿಕೊಂಡಿದ್ದಾರೆ.