ಪ್ರೇಕ್ಷಕರ ಅಖಾಡಕ್ಕೆ ಧುಮುಕಲು ಸಿದ್ಧನಾಗಿರೋ ಪೈಲ್ವಾನ್, ಅಖಾಡಕ್ಕಿಳಿಯುತ್ತಿರೋದು ಆಗಸ್ಟ್ 8ಕ್ಕೆ. ವರಮಹಾಲಕ್ಷ್ಮಿ ಹಬ್ಬಕ್ಕೆ. ಆ ದಿನ ಪೈಲ್ವಾನ್ ಹೊಸ ದಾಖಲೆ ಬರೆಯಲಿದ್ದಾರೆ. 2500ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಅಬ್ಬರಿಸಲಿದ್ದಾನೆ.
ಸುದೀಪ್ ಈ ಚಿತ್ರಕ್ಕಾಗಿ ಹರಿಸಿರುವ ಬೆವರು ಸ್ವಲ್ಪ ಮಟ್ಟದಲ್ಲ. ಸುದೀಪ್ ಇಡೀ ಚಿತ್ರಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಕೃಷ್ಣ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ ಪೈಲ್ವಾನ್. ಸುನಿಲ್ ಶೆಟ್ಟಿ ಇನ್ನೊಂದು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಆಕಾಂಕ್ಷಾ ಸಿಂಗ್ ಚಿತ್ರದ ನಾಯಕಿ.