ಉಪೇಂದ್ರ, ರಚಿತಾ ರಾಮ್, ಸೋನು ಗೌಡ ಅಭಿನಯದ ಐ ಲವ್ ಯೂ ಚಿತ್ರ 25 ದಿನ ಪೂರೈಸಿದೆ. ಆರ್. ಚಂದ್ರು ನಿರ್ದೇಶನದ ಐ ಲವ್ ಯೂ ಬಾಕ್ಸಾಫೀಸ್ ಲೂಟಿ ಹೊಡೆಯುತ್ತಿದೆಯಷ್ಟೇ ಅಲ್ಲ, ಕನ್ನಡ ಹಾಗೂ ತೆಲುಗಿನಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ.
ಐ ಲವ್ ಯೂ ಸಿನಿಮಾ ಪ್ರದರ್ಶನ 25 ದಿನ ಪೂರೈಸಿ, 50ನೇ ದಿನದತ್ತ ಮುನ್ನುಗ್ಗುತ್ತಿದೆ. ಅದಕ್ಕಿಂತ ಹೊಸ ವಿಷಯವೇನು ಗೊತ್ತೇ.. ಐ ಲವ್ ಯೂ 325ಕ್ಕೂ ಹೆಚ್ಚು ಕೇಂದ್ರಗಳಲ್ಲಿ 25 ದಿನ ಪೂರೈಸಿರುವುದು. ಇದು ದಾಖಲೆ.