ನೀನಾಸಂ ಸತೀಶ್, ಉದಯ್ ಮೆಹ್ತಾ ಕಾಂಬಿನೇಷನ್ನಲ್ಲಿ ಬರುತ್ತಿರುವ ಸಿನಿಮಾ ಬ್ರಹ್ಮಚಾರಿ. ಲವ್ ಇನ್ ಮಂಡ್ಯ ನಂತರ ಹೀರೋ ಮತ್ತು ನಿರ್ಮಾಪಕರು ಮತ್ತೆ ಒಂದಾಗಿರುವ ಚಿತ್ರವಿದು. ಚಿತ್ರದ ನಿರ್ದೇಶಕರು ಡಬಲ್ ಎಂಜಿನ್, ಬಾಂಬೆ ಮಿಠಾಯಿ ಚಿತ್ರಗಳ ಚಂದ್ರಮೋಹನ್. ಆ ಚಿತ್ರಗಳಲ್ಲಿ ಚಂದ್ರಮೋಹನ್ ಡಬಲ್ ಮೀನಿಂಗ್ ಸಂಭಾಷಣೆಯನ್ನು ಹೆಚ್ಚು ಬಳಸಿದ್ದರು. ಹೀಗಾಗಿಯೇ ಇವರ ಜೊತೆ ಚಿತ್ರ ಮಾಡೋದಾ ಎಂಬ ಯೋಚನೆಯಲ್ಲಿದ್ದೆ. ಅವರ ಸಹವಾಸವೇ ಬೇಡ ಎಂದುಕೊಂಡಿದ್ದೆ. ಆದರೆ, ಕಥೆ ಕೇಳುವಾಗಲೇ ನಗು ತಡೆಯೋಕೆ ಆಗಲಿಲ್ಲ. ಹೀಗಾಗಿ ಒಪ್ಪಿಕೊಂಡೆ ಎನ್ನುವ ಸತೀಶ್, ಚಿತ್ರದಲ್ಲಿ ಮುಜುಗರ ತರುವ ಹಾಸ್ಯ ಇಲ್ಲ ಎನ್ನುತ್ತಾರೆ.
ನಾಯಕಿಯಾಗಿ ನಟಿಸಿರುವ ಆದಿತಿ ಪ್ರಭುದೇವ ಅವರಿಗೆ ಸತೀಶ್ ಎದುರು ನಗು ಕಂಟ್ರೋಲ್ ಮಾಡಿಕೊಂಡು ನಟಿಸುವುದೇ ದೊಡ್ಡ ಚಾಲೆಂಜ್ ಆಗಿತ್ತಂತೆ. ದತ್ತಣ್ಣ, ಕೆಆರ್ಪೇಟೆ ಶಿವರಾಜ್, ಅಚ್ಯುತ್ ಕುಮಾರ್, ಪದ್ಮಜಾ ರಾವ್ ನಟಿಸಿರುವ ಚಿತ್ರ, ವಿಶೇಷವಾಗಿ ಹುಡುಗರಿಗೆ ಇಷ್ಟವಾಗಲಿದೆ ಅನ್ನೋದು ಚಿತ್ರತಂಡದವರು ಅದರಲ್ಲೂ ಚಿತ್ರದ ನಾಯಕಿ ಆದಿತಿ ಕಾನ್ಫಿಡೆನ್ಸು.