` ಮಂಜುನಾಥನ ಸನ್ನಿಧಿಯಲ್ಲಿ ಅಮೆರಿಕದ ಅಧ್ಯಕ್ಷ ಸಿಕ್ಕಿಬಿಟ್ಟ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
adhyaksha in america
Sharan, Ragini Image from Adhyakasha In America Movie

ಅಧ್ಯಕ್ಷ ಇನ್ ಅಮೆರಿಕ. ಬಿಡುಗಡೆಗೆ ರೆಡಿಯಾಗಿರುವ ಈ ಸಿನಿಮಾ ನಿರ್ದೇಶಕ ಯೋಗಾನಂದ್. ಚಿತ್ರರಂಗಕ್ಕೆ ಹೊಸಬರೇನಲ್ಲ. ಸ್ಟೈಲಿಷ್ ನಿರ್ದೇಶಕ ಹರ್ಷ ಜೊತೆ ಎಲ್ಲ ಚಿತ್ರಗಳಿಗೂ ಕೆಲಸ ಮಾಡಿರುವ ಯೋಗಾನಂದ್‍ಗೆ ಈ ಚಿತ್ರದ ಆಫರ್ ಸಿಕ್ಕಿದ್ದು ಧರ್ಮಸ್ಥಳದಲ್ಲಂತೆ. ಮಂಜುನಾಥನ ಸನ್ನಿಧಿಯಲ್ಲಿ ದರ್ಶನಕ್ಕೆ ನಿಂತಿದ್ದಾಗ ಫೋನ್ ಬಂತು. ಈ ಚಿತ್ರವನ್ನು ನೀವೇ ನಿರ್ದೇಶಿಸಬೇಕು ಎಂಬ ಆಫರ್ ಇತ್ತು. ಮಂಜುನಾಥ ಕಣ್ತೆರೆದಿದ್ದ ಎನ್ನುತ್ತಾರೆ ಯೋಗಾನಂದ್.

ಶರಣ್ ಅಧ್ಯಕ್ಷನಾಗಿದ್ದರೆ, ಜೋಡಿಯಾಗಿರುವುದು ರಾಗಿಣಿ ದ್ವಿವೇದಿ. ಈ ಹಿಂದೆ ಶರಣ್‍ರ ಎರಡು ಚಿತ್ರಗಳಲ್ಲಿ ಸ್ಪೆಷಲ್ ಸಾಂಗುಗಳಿಗೆ ಕುಣಿದು ಕುಪ್ಪಳಿಸಿದ್ದ ರಾಗಿಣಿ, ಈ ಚಿತ್ರದಲ್ಲಿ ಶರಣ್‍ಗೇ ಹೀರೋಯಿನ್. 

ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿದ್ದಾರಂತೆ ರಾಗಿಣಿ. ಶರಣ್ ಮತ್ತು ರಾಗಿಣಿ ಡ್ಯಾನ್ಸ್ ಕೂಡಾ ಬೊಂಬಾಟ್ ಆಗಿವೆಯಂತೆ. ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ನಗೋಕೆ ನೀವು ರೆಡಿಯಾಗಿ.