ಏನಿದು ವೈವೈವೈ.. ಅಂತೀರಾ.. ಬೇರೇನಲ್ಲ.. ಇದು ವೈಭವಿ, ವೈಸಿರಿ, ವೈನಿಧಿ ಎಂಬ ನಾಯಕಿಯರ ಹೆಸರು. ಅವರು ಅಭಿನಯಿಸಿರುವ ಹೊಸ ಚಿತ್ರದ ಹೆಸರೇ ಯಾನ. ಜೈಜಗದೀಶ್-ವಿಜಯಲಕ್ಷ್ಮೀ ಸಿಂಗ್ ದಂಪತಿಯ ಮುದ್ದು ಮಕ್ಕಳು, ಈಗ ನಾಯಕಿಯರಾಗಿದ್ದಾರೆ. ನಿರ್ದೇಶನ ಮಾಡಿರೋದು ವಿಜಯಲಕ್ಷ್ಮೀ ಸಿಂಗ್.
ಇದು ಟ್ರಾವೆಲ್ ಜರ್ನಿ ಸ್ಟೋರಿ. ನನ್ನ ಮಕ್ಕಳೆಂದು ಚಿತ್ರಕ್ಕೆ ಸೆಲೆಕ್ಟ್ ಮಾಡಿಲ್ಲ. ನನ್ನ ಕಥೆಗೆ ಅವರು ಹೊಂದುವಂತಿದ್ದರು. ಅಲ್ಲದೆ, ಅವರಿಗೂ ನಟನೆಯಲ್ಲಿ ಆಸಕ್ತಿಯಿತ್ತು. ಹೀಗಾಗಿ ಅವರನ್ನೇ ಆಯ್ಕೆ ಮಾಡಿಕೊಂಡೆ. ಚಿತ್ರ ಚೆನ್ನಾಗಿ ಬಂದಿದೆ ಎಂದಿದ್ದಾರೆ ವಿಜಯಲಕ್ಷ್ಮೀ ಸಿಂಗ್.
ಈ ಮೂವರೂ ಮಕ್ಕಳು ಸ್ವಲ್ಪ ಹೆಚ್ಚೂ ಕಡಿಮೆ ಒಂದೇ ರೀತಿ ಕಾಣ್ತಾರೆ. ಅಷ್ಟರಮಟ್ಟಿಗೆ ಹೋಲಿಕೆಗಳಿವೆ. ಇವರಿಗೆ ತಂದೆ ತಾಯಿಯಾಗಿ ನಟಿಸಿರೋದು ಅನಂತ್‍ನಾಗ್ ಮತ್ತು ಸುಹಾಸಿನಿ.